Mulabagilu : ಮುಳಬಾಗಿಲು ನಗರದ ಸೋಮೇಶ್ವರ ಪಾಳ್ಯದ ಐತಿಹಾಸಿಕ ಪ್ರಸಿದ್ಧ ಪ್ರಸನ್ನ ಸೋಮೇಶ್ವರ ಸ್ವಾಮಿ ಬ್ರಹ್ಮರಥೋತ್ಸವ (Someshwara swamy Rathotsava) ಬುಧವಾರ ಅದ್ದೂರಿಯಾಗಿ ನೆರೆವೇರಿಸಲಯಿತು.
ರಥೋತ್ಸವದ ಪ್ರಯುಕ್ತ ಮೂಲ ದೇವರ ವಿಗ್ರಹವನ್ನು ವಿವಿಧ ಹೂಗಳಿಂದ ಸಿಂಗರಿಸಿ ಹೋಮ, ಅಭಿಷೇಕ, ಕಳಶಾರಾಧನೆ, ಮಹಾ ಮಂಗಳಾರತಿ, ಕಳಶಾರೋಹಣ, ಧ್ವಜಾರೋಹಣ, ಪಂಚಾಮೃತ, ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನಡೆದವು. ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಗ್ರೇಡ್ 2 ತಹಶೀಲ್ದಾರ್ ಬಿ.ಆರ್.ಮುನಿವೆಂಕಟಪ್ಪ ಮಧ್ಯಾಹ್ನ ಅಭಿಜಿನ್ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಿದರು. ಸಾವಿರಾರು ಭಕ್ತರು ರಥವನ್ನು ಎಳೆದು ರಥದ ಮೇಲೆ ದವಣ, ಚಿಲ್ಲರೆ ಹಣ, ಉಪ್ಪು, ಹೂ ಮುಂತಾದ ವಸ್ತುಗಳನ್ನು ಎಸೆದು ಹರಕೆ ತೀರಿಸಿದರು.