Chintamani : ಕರ್ನಾಟಕ ರಾಜ್ಯ ವಕ್ಪ್ ಬೋರ್ಡ್‌ನಿಂದ ಚಿಂತಾಮಣಿ ತಾಲ್ಲೂಕಿನ ಮುರುಗಮಲೆ ಗ್ರಾಮದ ಅಮ್ಮಾಜಾನ್, ಬಾವಾಜಾನ್ ದರ್ಗಾದಲ್ಲಿ (Murugamalla Dargah) ನಡೆಯುತ್ತಿದ್ದ ಗಂಧೋತ್ಸವಕ್ಕೆ (Gandhostava) ಬುಧವಾರ ಬೆಳಗ್ಗೆ ಅದ್ದೂರಿಯಾಗಿ ತೆರೆಬಿದಿದ್ದೆ.
ಗ್ರಾಮದ ವಲ್ಫ್ ಕಚೇರಿಯಿಂದ ಮುಜಾವರ್ ಖುರ್ರಮ್ ಆಲಿಬಾಬು ತಂಡವು ಗಂಧವನ್ನು ಹೊತ್ತು ರಾತ್ರಿ 10 ಗಂಟೆಗೆ ಮೆರವಣಿಗೆಯಲ್ಲಿ ತೆರಳಿದರು. ತಮಟೆ ವಾದನ, ಕುರಾನ್ ಪಠಣವು ಶ್ರದ್ಧಾ ಭಕ್ತಿಯಿಂದ ನಡೆಯಿತು. ಅಂತಿಮವಾಗಿ ರಾತ್ರಿ 3 ಗಂಟೆಗೆ ಮೆರವಣಿಗೆ ದರ್ಗಾ ತಲುಪಿತು. ದರ್ಗಾದಲ್ಲಿ ಗಂಧವನ್ನು ಸಮರ್ಪಿಸಲಾಯಿತು. ದರ್ಗಾ ಆವರಣದಲ್ಲಿ ನಡೆದ ಉತ್ತರಪ್ರದೇಶದ ಜುನೈದ್ ಸುಲ್ತಾನಿ ಮತ್ತು ಪರ್ವೇಜ್ ಆಲಂ ತಂಡದ ಕವ್ವಾಲಿ ಕಾರ್ಯಕ್ರಮವು 2 ದಿನಗಳ ಉರುಸ್‌ನ ಪ್ರಮುಖ ಆಕರ್ಷಣೆಯಾಗಿತ್ತು.
ವಕ್ಫ್ ಬೋರ್ಡ್ ಜಿಲ್ಲಾ ಘಟಕದ ಅಧ್ಯಕ್ಷ ಮುಜಮಿಲ್ ಪಾಷಾ, ನವೀದ್ ಪಾಷಾ, ನವಾಜ್ ಪಾಷಾ, ದರ್ಗಾ ಮೇಲ್ವಿಚಾರಕ ತಯ್ಯೂಬ್ ನವಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಜಿ ಅನ್ಸರ್‌ಖಾನ್, ದರ್ಗಾ ಸಮಿತಿ ಉಪಾಧ್ಯಕ್ಷ ಟೊಮೆಟೊ ಗೌಸ್, ಕಾರ್ಯದರ್ಶಿ ಆರೀಫ್ ಖಾನ್, ಅಮೀರ್‌ಜಾನ್, ಅಮಾನುಲ್ಲಾ, ನಜೀರ್, ಜಬೀವುಲ್ಲಾ, ಕಲೀಮ್ ಪಾಷಾ ಭಾಗವಹಿಸಿದ್ದರು.