Chikkaballapur : ಶುಕ್ರವಾರ ನಟರತ್ನ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರ 62ನೇ ಜನ್ಮದಿನಾಚರಣೆ (NBK 62 Birthday) ಅಂಗವಾಗಿ ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಭವನದಲ್ಲಿ ನಂದಮೂರಿ ಬಾಲಕೃಷ್ಣ ಅಭಿಮಾನಿಗಳ ಸಂಘದ ವತಿಯಿಂದ ಸ್ವಯಂಪ್ರೇರಿತ ರಕ್ತದಾನ ಶಿಬಿರ (Blood Donation Camp) ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ನಂದಮೂರಿ ಬಾಲಕೃಷ್ಣ ಅಭಿಮಾನಿಗಳ ಸಂಘದ ಜಿ.ಸಿ.ವೆಂಕಟರೋಣಪ್ಪ ” ನಂದಮೂರಿ ಬಾಲಕೃಷ್ಣ ತೆಲುಗಿನ ಅಭಿಜಾತ ಕಲಾವಿಧರೇ ಆಗಿದ್ದರೂ ಅವರ ನಟನೆ ಸಾಮಾಜಿಕ ಕಾರ್ಯಗಳು ನಮ್ಮನ್ನು ಪ್ರೇರೇಪಿಸಿದ ಕಾರಣ ಅವರ ಹೆಸರಿನಲ್ಲಿ ಸಂಘವನ್ನು ಕಟ್ಟಿಕೊಂಡು ಸೇವಾ ಕಾರ್ಯಗಳನ್ನು ಮುಂದುವರಸಿಕೊಂಡು ಹೋಗುತ್ತಿದ್ದೇವೆ. ಮನುಷ್ಯ ಮನುಷ್ಯರಿಗೆ ಮಾತ್ರ ರಕ್ತದಾನ ಮಾಡಲು ಸಾಧ್ಯವಾಗಿರುವುದರಿಂದ ಇಂತಹ ಮಹತ್ಕಾರ್ಯಕ್ಕೆ ಮುಂದಾಗುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಬಹುದಾಗಿದೆ. ಬಾಲಯ್ಯ ರವರ ಕರೆಯಂತೆ ನಾವು ಕಳೆದ ಹತ್ತಾರು ವರ್ಷಗಳಿಂದ ರಕ್ತದಾನ ಶಿಬಿರಗಳನ್ನು ಆಯೋಜಿಸಿ ನೊಂದವರಿಗೆ ನೆರವಾಗುವ ಕೆಲಸ ಮಾಡಲಾಗುತ್ತಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಂದಮೂರಿ ಅಭಿಮಾನಿಗಳ ಸಂಘದ ರವಿ, ಮುರುಳಿ ಬೆಂಗಳೂರು, ಕುಮಾರ್, ಮುನಿನಾರಾಯಣಪ್ಪ, ಶ್ರೀನಿವಾಸ್, ಪ್ರಕಾಶ್, ಅಫೀಜ್, ಮಹೇಶ್, ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur