ಚಿಕ್ಕಬಳ್ಳಾಪುರ: ನಂದಿ ಮೆಡಿಕಲ್ ಕಾಲೇಜಿನ ಹೊರರೋಗಿ ವಿಭಾಗದ ಆರಂಭದಿಂದ ಜಿಲ್ಲೆಯ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಇನ್ನಷ್ಟು ಸುಲಭವಾಗಿ ದೊರೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸಾರಿಗೆ ಸಚಿವ ಬಿ.ಎಸ್. ಸುರೇಶ್ ಹೇಳಿದ್ದಾರೆ.
Quick facts: Minister B.S. Suresh inaugurated the OPD wing of Nandi Medical College near Aroor, Chikkaballapur taluk, on Wednesday; MP Dr. K. Sudhakar called it the realisation of a years-long dream, and MLA Pradeep Eshwar proposed naming the OPD after Sudhakar’s mother Shantamma.

ಸಚಿವರು ಏನೆಂದರು?
ಚಿಕ್ಕಬಳ್ಳಾಪುರ ತಾಲ್ಲೂಕಿನ ಅರೂರ್ ಬಳಿ ಇರುವ ನಂದಿ ಮೆಡಿಕಲ್ ಕಾಲೇಜಿನ ಹೊರರೋಗಿ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಬಿ.ಎಸ್. ಸುರೇಶ್, ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಕೇವಲ ಉತ್ತಮ ವೈದ್ಯರಾಗುವುದಷ್ಟೇ ಅಲ್ಲದೆ, ಜನರ ನೋವು-ಸಂಕಷ್ಟಗಳನ್ನು ಅರ್ಥಮಾಡಿಕೊಂಡು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಬೇಕು ಎಂದು ಆಶಿಸಿದರು. ಗ್ರಾಮೀಣ ಭಾಗದ ಜನರು ದೂರದ ನಗರಗಳಿಗೆ ತೆರಳಿ ಚಿಕಿತ್ಸೆ ಪಡೆಯುವ ಅನಿವಾರ್ಯತೆ ಕಡಿಮೆಯಾಗಿ, ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.
ಸಂಸದ ಡಾ. ಸುಧಾಕರ್ ಏನೆಂದರು?
ಸಂಸದ ಡಾ.ಕೆ. ಸುಧಾಕರ್ ಮಾತನಾಡಿ, ಇಂದಿನ ಉದ್ಘಾಟನೆ ತಮ್ಮ ಪಾಲಿಗೆ ಕೇವಲ ಕಾರ್ಯಕ್ರಮವಲ್ಲ, ಹಲವು ವರ್ಷಗಳಿಂದ ಕಂಡಿದ್ದ ಕನಸು ನನಸಾದ ಭಾವನಾತ್ಮಕ ಕ್ಷಣ ಎಂದು ಸಂತಸ ವ್ಯಕ್ತಪಡಿಸಿದರು. ಹಿಂದಿನ ಸರ್ಕಾರದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ, ತಾವು ವೈದ್ಯಕೀಯ ವಿದ್ಯಾರ್ಥಿಯಾಗಿದ್ದ ದಿನಗಳಿಂದಲೂ ಕಾಡುತ್ತಿದ್ದ ಕನಸೊಂದನ್ನು ನನಸು ಮಾಡುವ ಅವಕಾಶ ದೊರೆಯಿತು ಎಂದು ತಿಳಿಸಿದ ಅವರು, ಚಿಕ್ಕಬಳ್ಳಾಪುರ ಜಿಲ್ಲೆಗೆ ಸುಸಜ್ಜಿತ ಸರ್ಕಾರಿ ಮೆಡಿಕಲ್ ಕಾಲೇಜು ತರಲು ತಮ್ಮ ರಾಜಕೀಯ ಭವಿಷ್ಯವನ್ನೇ ಪಣಕ್ಕಿಟ್ಟು ಶ್ರಮಿಸಿದ್ದಾಗಿ ನೆನಪಿಸಿಕೊಂಡರು. ಒಂದು ಯೋಜನೆ ಕಟ್ಟಡವಾಗಿ ಪೂರ್ಣಗೊಳ್ಳುವುದಷ್ಟೇ ಅಭಿವೃದ್ಧಿಯಲ್ಲ, ಬಾಗಿಲು ತೆರೆದು ಬಡವರು ಹಾಗೂ ಮಧ್ಯಮ ವರ್ಗದ ಜನಸಾಮಾನ್ಯರಿಗೆ ಗುಣಮಟ್ಟದ ಸೇವೆ ದೊರೆಯುವ ದಿನವೇ ನಿಜವಾದ ಸಾರ್ಥಕತೆ ಎಂದು ಹೇಳಿದರು.
ಶಾಂತಮ್ಮ ಅವರ ಹೆಸರಿಡಲು ಪ್ರಸ್ತಾವನೆ ಏಕೆ?
ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ನಂದಿ ಮೆಡಿಕಲ್ ಕಾಲೇಜಿನ ಹೊರರೋಗಿ ವಿಭಾಗಕ್ಕೆ ಸಂಸದ ಡಾ.ಕೆ. ಸುಧಾಕರ್ ಅವರ ತಾಯಿ ಶಾಂತಮ್ಮ ಅವರ ಹೆಸರನ್ನು ಇಡಬೇಕೆಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ, ಜಿಲ್ಲಾಧಿಕಾರಿ ಜಿ. ಪ್ರಭು, ಜಿಲ್ಲಾ ಪಂಚಾಯತ್ ಸಿಇಒ ಡಾ.ವೈ. ನವೀನ್ ಭಟ್, ಮೆಡಿಕಲ್ ಕಾಲೇಜಿನ ಡೀನ್ ಮಂಜುನಾಥ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ)
Stay tuned for more local updates.

