- Advertisement -
- Advertisement -
- Advertisement -
- Advertisement -
Chikkaballapur : ಸೋಮವಾರ ಬೆಳಗ್ಗೆ ತಾಲ್ಲೂಕಿನ ನಂದಿ (Nandi) ಗ್ರಾಮದ ಐತಿಹಾಸಿಕ ಭೋಗನಂದೀಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರತಿ ವರ್ಷದ ಆಷಾಢ ಮಾಸದ ಕೊನೆ ಸೋಮವಾರ ಹಮ್ಮಿಕೊಳ್ಳುವ ನಂದಿಗಿರಿ ಪ್ರದಕ್ಷಿಣೆಗೆ ((Nandigiri Pradakshine) ಚಾಲನೆ ನೀಡಲಾಯಿತು.
ನಂದಿಗಿರಿ ಪ್ರದಕ್ಷಿಣಾ ಸೇವಾ ಟ್ರಸ್ಟ್ ನೇತೃತ್ವದಲ್ಲಿ ನಡೆದ 84ನೇ ವರ್ಷದ ಗಿರಿ ಪ್ರದಕ್ಷಿಣೆ ಕಾರ್ಯಕ್ರಮ ಭಕ್ತರು ಭೋಗನಂದೀಶ್ವರ ದೇವಾಲಯದಿಂದ ಪ್ರಾರಂಭಿಸಿ ಅಂಗಟ್ಟ, ಕುಡುವತಿ, ಕಾರಹಳ್ಳಿ ಕ್ರಾಸ್, ಬೆಟ್ಟದ ಕ್ರಾಸ್, ಹೆಗ್ಗಡಿಹಳ್ಳಿ, ಕಣಿವೆ ಬಸವಣ್ಣ, ಸುಲ್ತಾನ್ ಪೇಟೆ ಮಾರ್ಗವಾಗಿ ಪುನಃ ದೇವಾಲಯ ತಲುಪುವ ಮೂಲಕ ಅಂತ್ಯಗೊಳ್ಳುತ್ತದೆ.
ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ದೇವನಹಳ್ಳಿ, ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಂದ ಭಕ್ತರು ಪ್ರದಕ್ಷಿಣೆಯಲ್ಲಿ ಪಾಲ್ಗೊಂಡಿದ್ದರು.
For Daily Updates WhatsApp ‘HI’ to 7406303366
- Advertisement -