Chelur : ಚೇಳೂರು ತಾಲ್ಲೂಕಿನ ಪಾಳ್ಯಕೆರೆ (Palyakere) ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘದ (Primary Agricultural Department Co Operative Society) (VSS) ಅಧ್ಯಕ್ಷರಾಗಿದ್ದ ಮಾಚನಪಲ್ಲಿ ವೆಂಕಟ್ರಾಮಿರೆಡ್ಡಿ ಅಕಾಲಿಕ ಮರಣವಾದ ಕಾರಣ ತೆರವಾದ ಅಧ್ಯಕ್ಷರ (President) ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಜೆ.ಪಿ ಚಂದ್ರಶೇಖರರೆಡ್ಡಿ (J.P. Chandrashekhar Reddy) ಆಯ್ಕೆಯಾಗಿದ್ದಾರೆ.
13 ಜನ ನಿರ್ದೇಶಕರನ್ನು ಒಳಗೊಂಡ ಸಂಘದಲ್ಲಿ ನಿರ್ದೇಶಕ ಜಿಂಕಪಲ್ಲಿ ಜೆ.ಪಿ ಚಂದ್ರಶೇಖರರೆಡ್ಡಿ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯಾಗಿರುವುದಾಗಿ ಚುನಾವಣಾ ಅಧಿಕಾರಿ ಎಂ.ಪ್ರೇಮ್ ಕುಮಾರ್ ಘೋಷಿಸಿದರು.
ನಿದೇಶಕ ಪಿ.ವೆಂಕಟರೆಡ್ಡಿ, ಕೃಷ್ಣಾರೆಡ್ಡಿ, ಮಸ್ತಾನ್, ವೆಂಕಟ್ರಾಯಪ್ಪ, ಅಶ್ವಥಮ್ಮ, ಪಾರ್ವತಮ್ಮ, ಲಕ್ಷ್ಮಿದೇವಮ್ಮ, ಈರಪ್ಪ, ಮಂಜುನಾಥ, ಸಂಘದ ಸಿಇಒ ಬಿ.ಕೆ ಶ್ರೀನಿವಾಸರೆಡ್ಡಿ ಹಾಜರಿದ್ದರು.
Facebook: https://www.facebook.com/hicbpur
Twitter: https://twitter.com/hicbpur
Your email address will not be published. Required fields are marked *
Save my name, email, and website in this browser for the next time I comment.
2021 Chikkaballapur.com