Gauribidanur : ಗೌರಿಬಿದನೂರು ನಗರದ ವಿವಿಧ ವಾರ್ಡ್‌ಗಳಲ್ಲಿ ಶುಕ್ರವಾರ ಗೌರಿಬಿದನೂರು ತಾಲ್ಲೂಕು ಆಡಳಿತದ ವತಿಯಿಂದ ಪಿಂಚಣಿ ಅದಾಲತ್ (Pension Adalat) ನಡೆಯಿತು.
ತಹಶೀಲ್ದಾರ್ ಮಹೇಶ್ ಎಸ್.ಪತ್ರಿ ಮಾತನಾಡಿ, ನಗರದಲ್ಲಿ ಪಿಂಚಿಣಿಯಿಂದ ವಂಚಿತರಾಗಿರುವವನ್ನು ಗುರುತಿಸುವ ಸಲುವಾಗಿ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದ್ದು ನಗರದ ವಾರ್ಡ್ ಸದಸ್ಯರೊಂದಿಗೆ ಮನೆ ಮನೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪಿಂಚಣಿ ಸೌಲಭ್ಯದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ನಗರದ 31 ವಾರ್ಡ್‍ಗಳಲ್ಲಿ ಪಿಂಚಣಿ ಸೌಲಭ್ಯ ವಂಚಿತರನ್ನು ಗುರುತಿಸಿ ಅರ್ಜಿ ಪಡೆದು ಸರ್ಕಾರದಿಂದ ಸೌಲಭ್ಯ ಒದಗಿಸಲಾಗುವುದು. ಅದಾಲತ್ 10 ದಿನ ನಡೆಯಲಿದ್ದು ಸಾರ್ವಜನಿಕರು ಸಹಕರಿಸುವಂತೆ ಕೋರಿದರು.
ನಗರಸಭೆ ಅಧ್ಯಕ್ಷ ಲಕ್ಷ್ಮಿನಾರಾಯಣಪ್ಪ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದರು.