Chikkaballapur : ರೈತರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯ ಸೌಲಭ್ಯ ಪಡೆಯಲು e-KYC ಮಾಡಿಸುವುದು ಕಡ್ಡಾಯ. ಈಗಾಗಲೇ ನೋಂದಾಯಿತರಾಗಿರುವ ರೈತರು https://pmkisan.gov.in ನಲ್ಲಿ ಅಥವಾ ಮೊಬೈಲ್‌ನಿಂದ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಕೆಲವು ರೈತರಲ್ಲಿ ಆಂಡ್ರಾಯ್ಡ್ ಮೊಬೈಲ್ ಇಲ್ಲ. ಅಂತಹವರು ಗ್ರಾಮ್ ಒನ್ ಸೇವಾ ಕೇಂದ್ರಗಳ ಮೂಲಕ ಅಥವಾ ಸೈಬರ್‌ಗಳಲ್ಲಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಬಹುದು ಎಂದು ಕೃಷಿ ಇಲಾಖೆ ಜಂಟಿ ಅಧಿಕಾರಿಗಳು ತಿಳಿಸಿದ್ದಾರೆ.
ರೈತರು ತಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ನೊಂದಿಗೆ ಜೋಡಣಿ ಮಾಡಿಸಬೇಕು.
ರೈತರ ಆಧಾರ್ ಕಾರ್ಡ್‌ನಲ್ಲಿ ಮೊಬೈಲ್ ಸಂಖ್ಯೆ ನಮೂದಾಗದಿರುವುದು, ನಮೂದಾಗಿರುವ ಮೊಬೈಲ್ ಸಂಖ್ಯೆ ತಪ್ಪಾಗಿರುವುದು, ಮೊಬೈಲ್ ನಂಬರ್‌ಗಳು ಅಸ್ತಿತ್ವ ಕಳೆದುಕೊಂದಿರುವಂತಹವರು ತಮ್ಮಲ್ಲಿರುವ ಈಗಿನ ಮೊಬೈಲ್ ಸಂಖ್ಯೆಯ ಮೂಲಕ ಪ್ರಕ್ರಿಯೆ ಆರಂಭಿಸಿದರೆ ಒಟಿಪಿ ಬರುತ್ತದೆ. ಆದರೆ ಅಲ್ಲಿಂದ ಮುಂದಿನ ಹಂತಕ್ಕೆ ತೆರೆದುಕೊಳ್ಳದೆ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ. ಇಂಥವರು ಆಧಾರ್ ಕಾರ್ಡ್ ಜತೆ Grama One ಸೇವಾ ಕೇಂದ್ರಗಳಿಗೆ ತೆರಳಿ ಬಯೋಮೆಟ್ರಿಕ್ (ಹೆಬ್ಬೆಟ್ಟಿನ ಗುರುತು) ಮಾಡುವುದರ ಮೂಲಕ e-KYC ಪೂರ್ಣಗೊಳಿಸಬಹುದು. pmkisan.gov.in ಜಾಲತಾಣದಲ್ಲೂ e-KYC ಪೂರ್ಣಗೊಳಿಸಬಹುದು ಎಂದು ಅವರು ತಿಳಿಸಿದ್ದಾರೆ.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur