Chikkaballapur : ವಿದ್ಯುತ್ ಉಪಕೇಂದ್ರ ಗಳಲ್ಲಿ ನಿರ್ವಹಣಾ ಕಾಮಗಾರಿಗಳ ಕಾರಣ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಬಾಗೇಪಲ್ಲಿ, ಶಿಡ್ಲಘಟ್ಟ ತಾಲ್ಲೂಕಿನ ಗ್ರಾಮಗಳಲ್ಲಿ ಡಿ.4ರಂದು ವಿದ್ಯುತ್ ವ್ಯತ್ಯಯವಾಗಲಿದೆ.
ಗೌರಿಬಿದನೂರು
Gauribidanur : ಗೌರಿಬಿದನೂರು ತಾಲ್ಲೂಕಿನ ಗೆದರೆ ಕೊಂಡಾಪುರ, ಸಿಂಗಾನಹಳ್ಳಿ, ಜಿ.ಬೊಮ್ಮಸಂದ್ರ, ನಾರಸಿಂಹನಹಳ್ಳಿ, ಮಂಚೇನಹಳ್ಳಿ, ಬಿಸಲಹಳ್ಳಿ, ಪುರ, ಪಿ.ನಾಗೇನಹಳ್ಳಿ, ಭಕ್ತರಹಳ್ಳಿ, ಗಿಡಗಾನಹಳ್ಳಿ, ದ್ವಾರಗಾನಹಳ್ಳಿ, ಕೊಂಡೇನಹಳ್ಳಿ, ವೇದಲವೇಣಿ, ತಾಲ್ಲೂಕು ಕಚೇರಿ, ಕುರುಬರಹಳ್ಳಿ, ಅಲಕಾಪುರ, ಇಡಗೂರು, ಭೀಮನ ಹಳ್ಳಿ, ಬಳಗೇರಿ, ಹನುಮೇನಹಳ್ಳಿ, ತೊಂಡೇಬಾವಿ, ಪೋತೇನಹಳ್ಳಿ, ಹಳೆಹಳ್ಳಿ, ಗೌಡಗೆರೆ, ವರವಣಿ, ಕಮಲಾ ಪುರ, ಕದಿರಿದೇವರಹಳ್ಳಿ, ಪಿಂಜಾರಲ ಹಳ್ಳಿ, ಚಿಕ್ಕಹೊಸಹಳ್ಳಿ, ಮೇಳ್ಯ, ಜಗರೆಡ್ಡಿಹಳ್ಳಿ, ರಾಮಚಂದ್ರಪುರ, ಗೌಡಸಂದ್ರ, ಉಚ್ಚೋದನಹಳ್ಳಿ, ಚಿಟ್ಟಾ ವಲಹಳ್ಳಿ, ದಿನ್ನೇನಹಳ್ಳಿ, ಹನುಮೇನ ಹಳ್ಳಿ, ಆನುಡಿ, ರಮಾಪುರ, ಕುರುಬರ ಪಾಳ್ಯ, ಹಂಪಸಂದ್ರ, ಉಪ್ಪಾರಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಧ್ಯಾಹ್ನ 12ರಿಂದ ಮಧ್ಯಾಹ್ನ 2ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಬಾಗೇಪಲ್ಲಿ
Bagepalli : ಬಾಗೇಪಲ್ಲಿ ತಾಲ್ಲೂಕಿನ ಗಂಟಂವಾರ ಪಲ್ಲಿ, ನಾರೇಪಲ್ಲಿ, ಹೊಸಹೂಡ್ಯ, ಟಿ.ಬಿ.ಕ್ರಾಸ್, ಅಬಕವಾರಿಪಲ್ಲಿ, ಆದಿಗಾನಪಲ್ಲಿ, ಕಾನಗಮಾಕಲಪಲ್ಲಿ, ನಡಂಪಲ್ಲಿ, ಪಿಳ್ಳಗುಟ್ಟ, ಮೆರವುಪಲ್ಲಿ, ಪಾಪಿನಾಯಕನಪಲ್ಲಿ, ಗಿರಿಯಪಲ್ಲಿ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಮಧ್ಯಾಹ್ನ 1ರಿಂದ 3ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಶಿಡ್ಲಘಟ್ಟ
Sidlaghatta : ಡಿಸೆಂಬರ್ 2 ರಿಂದ 4 ರವರೆಗೆ ಜಂಗಮಕೋಟೆ 66/11 ಕೆವಿ ಉಪವಿದ್ಯುತ್ ಕೇಂದ್ರದ ಎಫ್-5 ಜಂಗಮಕೋಟೆ ಫೀಡರ್ ವಿದ್ಯುತ್ ಮಾರ್ಗಗಳ ವಾಹಕ ಬದಲಾವಣೆ ಕಾಮಗಾರಿಯನ್ನು ಹಾಗೂ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಕೈಗೊಂಡಿರುವುದರಿಂದ ಜಂಗಮಕೋಟೆ 66/11 ಕೆವಿ ಉಪವಿದ್ಯುತ್ ಕೇಂದ್ರದ ಎಫ್-5 ಜಂಗಮಕೋಟೆ ಫೀಡರ್ ಮಾರ್ಗದ ಮೂಲಕ ವಿದ್ಯುತ್ ಸರಬರಾಜಾಗುವ ಜಂಗಮಕೋಟೆ, ಘಟ್ಟಮಾರನಹಳ್ಳಿ ಕ್ರಾಸ್, ಸುಗಟೂರು, ತೊಟ್ಟಿಬಾವಿ, ಸುಂಡ್ರಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಡಿಸೆಂಬರ್ 2 ರಿಂದ 4 ರವರೆಗೆ ಮತ್ತು ಡಿಸೆಂಬರ್ 3 ರಂದು ಜಂಗಮಕೋಟೆ 66/11 ಕೆವಿ ಉಪವಿದ್ಯುತ್ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಯಣ್ಣಂಗೂರು, ಹೊಸಪೇಟೆ, ಬೈರಸಂದ್ರ, ನಾಗಮಂಗಲ, ಜಂಗಮಕೋಟೆ ಸುಗಟೂರು, ಬಳವನಹಳ್ಳಿ, ವೆಂಕಟಾಪುರ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುವುದರಿಂದ ಗ್ರಾಹಕರು ಸಹಕರಿಸಬೇಕೆಂದು ಎಇಇ ಬಿ.ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.