Gauribidanur : ಶನಿವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಲಿತ ಸಂಘರ್ಷ ಸಮಿತಿ (DSS) ಸಂಸ್ಥಾಪಕ ಸದಸ್ಯರು ಹಾಗೂ ಗೌರಿಬಿದನೂರು ತಾಲ್ಲೂಕಿನ ಐತಿಹಾಸಿಕ ವಿದುರಾಶ್ವತ್ಥದ ವೀರಸೌಧ (Veerasoudha – Vidurashwatha) ಹಾಗೂ ಚಿತ್ರಪಟ ಗ್ಯಾಲರಿಯ ಪರಿಕಲ್ಪನೆ ರೂವಾರಿ ಪ್ರೊ.ಬಿ.ಗಂಗಾಧರ ಮೂರ್ತಿ (B Gangadhara Murthy) (78) ನಿಧನರಾಗಿದ್ದಾರೆ (Demise).
ಪ್ರೊ.ಬಿ.ಗಂಗಾಧರಮೂರ್ತಿ ಅವರ ಮೃತದೇಹವನ್ನು ಭಾನುವಾರ ಬೆಳಿಗ್ಗೆ 6 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಗರದ ಕರೇಕಲಹಳ್ಳಿಯಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ನಂತರ ಮೃತದೇಹವನ್ನು ತೆರೆದ ವಾಹನದಲ್ಲಿ ಮನೆಯಿಂದ ನ್ಯಾಷನಲ್ ಕಾಲೇಜಿನ ಆವರಣಕ್ಕೆ ತಂದು ಅಲ್ಲಿಂದ ಬಿಎಚ್ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯ ಮೂಲಕ ಅಂಬೇಡ್ಕರ್ ವೃತ್ತದವರೆಗೆ ತರಲಾಯಿತು. ಅಪಾರ ಅಭಿಮಾನಿಗಳು, ಹೋರಾಟಗಾರರು ಬಿಜಿಎಂ ಅವರ ಅಂತಿಮ ದರ್ಶನ ಪಡೆದ ಬಳಿಕ ದೇಹವನ್ನು ಬೆಂಗಳೂರಿನ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಯಿತು.
ಮಾಜಿ ಸಂಸದ ಎಂ.ವೀರಪ್ಪ ಮೊಯ್ಲಿ (Veerappa Moily), ಮಾಜಿ ಸಚಿವ ಮಹದೇವಪ್ಪ, ಶಾಸಕ ಎನ್.ಎಚ್.ಶಿವಶಂಕರರೆಡ್ಡಿ (N H ShivashakarReddy) , ತಹಶೀಲ್ದಾರ್ ಎಚ್.ಶ್ರೀನಿವಾಸ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಕೋಡಿರಂಗಪ್ಪ ಸೇರಿದಂತೆ ಅಪಾರ ಮಂದಿ ಬಂದು ಬಳಗ ಹಾಗೂ ಅಭಿಮಾನಿಗಳು ಅಂತಿಮ ದರ್ಶನ ಪಡೆದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur