32.2 C
Bengaluru
Tuesday, March 3, 2026

ಶಿಡ್ಲಘಟ್ಟಕ್ಕೆ ರಾಮಸಮುದ್ರ ಕೆರೆ ನೀರು: ಗ್ರಾಮಸ್ಥರ ಪ್ರತಿಭಟನೆ

- Advertisement -
- Advertisement -

Chikkaballapur : ಶಿಡ್ಲಘಟ್ಟ ತಾಲ್ಲೂಕಿನ ದೇವಗಾನಹಳ್ಳಿ ಗ್ರಾಮಸ್ಥರು ಸಾದಲಿ ಹೋಬಳಿಯ ಎಸ್‌.ದೇವಗಾನಹಳ್ಳಿ ರಾಮಸಮುದ್ರ ಕೆರೆಯ (RamSamudra) ನೀರನ್ನು ಶಿಡ್ಲಘಟ್ಟ (Sidlaghatta drinking water project) ನಗರಕ್ಕೆ ಪೂರೈಸಲು ಜಿಲ್ಲಾಡಳಿತ ಮುಂದಾಗಿದ್ದು ತಕ್ಷಣವೇ ಈ ಯೋಜನೆ ಕೈಬಿಡಬೇಕು ಎಂದು ಆಗ್ರಹಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ಅವರಿಗೆ ಬುಧವಾರ ಮನವಿ (Devagaanahalli villagers protest) ಸಲ್ಲಿಸಿದರು.

ರಾಮಸಮುದ್ರ ಕೆರೆಯು 1889ರಲ್ಲಿ ಸ್ಥಾಪನೆಯಾಗಿದೆ. 1894ರಲ್ಲಿ ಉದ್ಘಾಟನೆಯಾಗಿದ್ದು ಕೃಷಿ ಬಳಕೆಗೆ ಎಂದೇ ಈ ಕೆರೆ ನಿರ್ಮಿಸಲಾಗಿದೆ. ಆದರೆ ಈಗ ಜಿಲ್ಲಾಡಳಿತ ಶಿಡ್ಲಘಟ್ಟ ನಗರಕ್ಕೆ ಇಲ್ಲಿಂದ ಕುಡಿಯುವ ನೀರು ಪೂರೈಸಲು ಯೋಜನೆ ರೂಪಿಸುತ್ತಿದೆ. ಇದನ್ನು ತಕ್ಷಣವೇ ಕೈ ಬಿಡಬೇಕು. ಯಾವುದೇ ರೀತಿಯ ನಾಲೆಗಳು ಈ ಭಾಗದಲ್ಲಿ ಇಲ್ಲ. ಈ ಕೆರೆಯೇ ಜಲಮೂಲಕ್ಕೆ ಆಧಾರ. ಇಲ್ಲಿನ ರೈತರಲ್ಲಿ ಶೇ 70ರಷ್ಟು ಬಡವರು, ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರು ಇದ್ದಾರೆ. ಈ ಕೆರೆ ನಂಬಿ ಜೀವನ ಸಾಗಿಸುತ್ತಿದ್ದಾರೆ. ತಾವು ಈ ಬಗ್ಗೆ ಸಮಗ್ರವಾಗಿ ಪರಿಶೀಲಿಸಬೇಕು. ಕುಡಿಯುವ ನೀರು ಪೂರೈಕೆ ಯೋಜನೆ ಕೈ ಬಿಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಜಾಗೃತ ಮತ್ತು ಮೇಲುಸ್ತುವಾರಿ ಸಮಿತಿ ಮಾಜಿ ಸದಸ್ಯ ಡಿ.ವಿ ಪ್ರಸಾದ್, ಸೀತಾರಾಮಪ್ಪ, ಎಂ.ನರಸಿಂಹರೆಡ್ಡಿ, ಮುನಿರಾಜು ವೈ.ವಿ., ಗ್ರಾ.ಪಂ ಮಾಜಿ ಸದಸ್ಯ ವಿ.ವೆಂಕಟೇಶಪ್ಪ, ಹನುಮಪ್ಪ ಬಿ., ನಾಗೇಶ್, ಚಂದ್ರಶೇಖರ್, ಪ್ರದೀಪ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!