Chikkaballapur : ನವೆಂಬರ್ 14ರಂದು ಚಿಕ್ಕಬಳ್ಳಾಪುರ ನಗರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ವಿಜಯದಶಮಿ ಪಥ ಸಂಚಲನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪ್ರಚಾರ ಪ್ರಮುಖ್ ಅಶ್ವತ್ಥನಾರಾಯಣ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ 70 ವರ್ಷಗಳಿಂದಲೂ ಆರ್‌ಎಸ್‌ಎಸ್ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಟುವಟಿಕೆಗಳನ್ನು ನಡೆಸುತ್ತಿದೆ. ಪ್ರತಿ ವರ್ಷದಂತೇ ಈ ವರ್ಷವೂ ಪಥಸಂಚಲನವನ್ನ ನಡೆಸುತ್ತಿದ್ದೇವೆ. ಕೆಎಸ್‌ಆರ್‌ಟಿಸಿ ಡಿಪೊ ಬಳಿಯ ಪ್ರಕೃತಿ ವಿದ್ಯಾನಿಕೇತನ ಶಾಲೆಯ ಎದುರಿನಿಂದ ಮಧ್ಯಾಹ್ನ 3.15ಕ್ಕೆ ಪ್ರಾರಂಭಗೊಳ್ಳುವ ಪಥಸಂಚಲನ, ಪ್ರಶಾಂತನಗರದ ಪತಿ ಆಸ್ಪತ್ರೆ ಮುಂಭಾಗದ ಮೈದಾನಗಳಲ್ಲಿ ಸಂಜೆ 5ಕ್ಕೆ ಸಮಾರೋಪಗೊಳ್ಳಲಿದೆ. ಪಥಸಂಚಲನದಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ 250ಕ್ಕೂ ಹೆಚ್ಚು ಮಂದಿ ಸ್ವಯಂಸೇವಕರು ಪಾಲ್ಗೊಳ್ಳುವರು. ಸಭೆಗೆ ಮಾನಸ ಆಸ್ಪತ್ರೆಯ ನಿರ್ದೇಶಕ ಮಧುಕರ್ ಅಧ್ಯಕ್ಷತೆ ವಹಿಸುವರು ಮತ್ತು ಪ್ರಾಂತ ಪ್ರಚಾರಕ ಗುರುಪ್ರಸಾದ್ ಉಪನ್ಯಾಸ ನೀಡುವರು ಎಂದು ಅವರು ತಿಳಿಸಿದರು.
ಈ ವರ್ಷ ತಾಲ್ಲೂಕು ಮಟ್ಟದಲ್ಲಿಯೂ ಪಥ ಸಂಚಲನ ನಡೆಯುತ್ತಿದ್ದು ನವೆಂಬರ್ 13ರಂದು ಬಾಗೇಪಲ್ಲಿಯಲ್ಲಿ, ನವೆಂಬರ್ 22ರಂದು ಚಿಂತಾಮಣಿ, ನವೆಂಬರ್ 28ರಂದು ಗೌರಿಬಿದನೂರಿನಲ್ಲಿ ಪಥ ಸಂಚಲನ ನಡೆಯಲಿದೆ. ಗುಡಿಬಂಡೆಯಲ್ಲಿ ಈಗಾಗಲೇ ಪಥ ಸಂಚಲನ ಪೂರ್ಣವಾಗಿದೆ ಎಂದು ಅಶ್ವತ್ಥನಾರಾಯಣ ಹೇಳಿದರು. .
ಸುದ್ಧಿಗೋಷ್ಠಿಯಲ್ಲಿ ನಗರ ಸಹ ಪ್ರಚಾರ ಪ್ರಮುಖ್ ಅರವಿಂದ ಕುಮಾರ್ ಉಪಸ್ಥಿತರಿದ್ದರು.