Chikkaballapur : ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಮನವರಿಕೆ ಮಾಡಿಕೊಡಲು ಚಿಕ್ಕಬಳ್ಳಾಪುರ ತಾಲ್ಲೂಕಿನ ಕುಪ್ಪಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಶಾಲಾ ಸಂಸತ್ ಚುನಾವಣೆ (School Parliamentary Elections) ಹಮ್ಮಿಕೊಳ್ಳಲಾಗಿತ್ತು. ಮಕ್ಕಳು ನಾಮಪತ್ರ (Nomination) ಸಲ್ಲಿಕೆ, ನಾಮಪತ್ರ ಹಿಂಪಡೆಯುವುದು, ಚಿಹ್ನೆ ಆಯ್ಕೆ ಮತ್ತು ಮತದಾನದ ದಿನಾಂಕ ನಿಗದಿ, ಬ್ಯಾಲೆಟ್ ಪೇಪರ್‌ನಲ್ಲಿ ಮತದಾನ (Ballet Voting) ಪ್ರಕ್ರಿಯೆ ಹೀಗೆ ಸಾರ್ವತ್ರಿಕ ಚುನಾವಣೆ (General election) ಗಳು ನಡೆಯುವ ವಿಧಾನದ ಅನುಭವವನ್ನು ಪಡೆದರು.
ಶಿಕ್ಷಕ ಕೆ.ಎಚ್.ನಾಗರಾಜ್ ಚುನಾವಣಾ ಉಸ್ತುವಾರಿವಹಿಸಿಕೊಂಡು ಮುಖ್ಯ ಶಿಕ್ಷಕ ವೆಂಕಟರವಣಪ್ಪ ಚುನಾವಣಾಧಿಕಾರಿಯಾಗಿ, ಎಂ.ನಾಗಮಣಿ ಸಹಾಯಕ ಚುನಾವಣಾಧಿಕಾರಿಯಾಗಿ, ಮತಗಟ್ಟೆ ಅಧಿಕಾರಿಗಳಾಗಿ ಅಪ್ಸರ ಸುಂದರರಾಜ್, ತೇಜ್ ಕುಮಾರ್ ಕಾರ್ಯ ನಿರ್ವಹಿಸಿದರು. ಮತ ಎಣಿಕೆ ಕಾರ್ಯ ನಡೆದು ಪ್ರೀತಮ್, ಪ್ರೇಮ್ ಸಾಗರ್, ವನಿತಾ, ರಂಜಿತ್, ಜೀವನ್, ಧನುಶ್ರೀ, ಶ್ರಾವಂತ್, ಹರಿನಂದನ್ ಮತ್ತು ಸೃಜನ್ ಶಾಲಾ ಸಂಸತ್‌ಗೆ ಆಯ್ಕೆಯಾದರು.
ಎಸ್‌ಡಿಎಂಸಿ ಅಧ್ಯಕ್ಷ ಶ್ರೀನಿವಾಸ್, ಜಿ.ಶ್ರೀನಿವಾಸ್, ಸದಸ್ಯ ನರಸಿಂಹಯ್ಯ, ಶ್ರೀನಿವಾಸ್, ಸಿದ್ದಪ್ಪ ಮತ್ತಿತರರು ಉಪಸ್ಥಿತರಿದ್ದರು.