Chelur : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮೀಸಲಾತಿಗೆ (SCST reservation) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸ್ವಾಗತಿಸಿ ಸೋಮವಾರ ದಲಿತ ಸಂಘಟನೆ ಒಕ್ಕೂಟದಿಂದ ಚೇಳೂರು ಪಟ್ಟಣದ ಮಹಾತ್ಮ ಗಾಂಧೀ ವೃತ್ತದ ಬಳಿ ಸಂಭ್ರಮಿಸಲಾಯಿತು.
ದಲಿತ ಸಮುದಾಯದ ಒಳ ಮೀಸಲಾತಿಗಾಗಿ ಅನೇಕ ವರ್ಷ ಮಹನೀಯರು ಹೋರಾಟ ಮಾಡಿದ್ದು ಈ ಆದೇಶದ ಮೂಲಕ ಅವರೆಲ್ಲರಿಗೂ ಸಾಮಾಜಿಕ ನ್ಯಾಯಕ್ಕೆ ಫಲ ಸಿಕ್ಕಂತಾಗಿದೆ ಎಂದು ಹೇಳಿ ರಾಜ್ಯ ಸರ್ಕಾರ ಅತೀ ಶೀಘ್ರದಲ್ಲೇ ಒಳಮಿಸಲಾತಿ ಜಾರಿಗೊಳಿಸವಂತೆ ಮನವಿ ಮಾಡಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕಡ್ಡೀಲು ವೆಂಕಟರಮಣ, ದಲಿತ ಸಂಘಟನೆಗಳ ಒಕ್ಕೂಟ ತಾಲ್ಲೂಕು ಸಂಚಾಲಕ ನರಸಿಂಹಪ್ಪ, ಟೈಲರ್ ಚಂದ್ರ, ಜೀವಿಕ ಹರೀಶ್, ಅಂಜಿ ಚಾಕವೇಲು, ಈಶ್ವರಪ್ಪ, ಪಿ.ಮಂಜುನಾಥ, ವೆಂಕಟೇಶ್, ನರಸಿಂಹಪ್ಪ, ಜಿ.ವಿ ಗಂಗುಲಪ್ಪ, ಬಾಬು, ರಾಮಾಂಜಿ, ಶ್ರೀನಿವಾಸ್ ವಾಲ್ಮೀಕಿ, ವೆಂಕಟರವಣಪ್ಪ ಭಾಗವಹಿಸಿದ್ದರು.