Chikkaballapur : ರೇಷ್ಮೆ ಇಲಾಖೆ (Sericulture Department) ಯನ್ನು ತೋಟಗಾರಿಕೆ ಇಲಾಖೆ (Agriculture Department) ಯೊಂದಿಗೆ ವಿಲೀನಗೊಳಿಸಬಾರದು (Merge) ಮತ್ತು ರೇಷ್ಮೆ ಇಲಾಖೆಯಲ್ಲಿನ 2346 ಹುದ್ದೆಗಳನ್ನು ರದ್ದು ಪಡಿಸುವ ಪ್ರಸ್ತಾವ ಕೈಬಿಡಬೇಕು ಎಂದು ಒತ್ತಾಯಿಸಿ ಚಿಕ್ಕಬಳ್ಳಾಪುರ ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ವತಿಯಿಂದ ಮಂಗಳವಾರ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ ಮನವಿ ಸ್ವೀಕರಿಸಿದರು.
ಸರ್.ಎಂ.ವಿಶ್ವೇಶ್ವರಯ್ಯ (Sir M Visvesvaraya) ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ (Krishna Raja Wadiyar IV) ಅವರ ದೂರದೃಷ್ಟಿಯಿಂದ ಈ ಇಲಾಖೆ ಆರಂಭವಾಗಿದ್ದು ಬಯಲು ಸೀಮೆ ರೈತರ ಜೀವನೋಪಾಯಕ್ಕೆ ಆಧಾರವಾಗಿ ರೇಷ್ಮೆ ನಿರುದ್ಯೋಗ ನಿವಾರಣೆಯಲ್ಲಿ ಬಹು ದೊಡ್ಡ ಪಾತ್ರವಹಿಸಿದೆ. ರೇಷ್ಮೆ ಇಲಾಖೆಯಲ್ಲಿನ 2,346 ಹುದ್ದೆಗಳನ್ನು ರದ್ದುಪಡಿಸುವುದರಿಂದ ರೇಷ್ಮೆ ವಿಸ್ತರಣೆ, ಸಂಶೋಧನೆ , ತಾಂತ್ರಿಕ ಜ್ಞಾನ ಪ್ರಸರಣಾ ಕಾರ್ಯ ಕುಂಠಿತವಾಗುತ್ತದೆ. ರೇಷ್ಮೆ ಕೃಷಿ ಮೇಲೆ ದುಷ್ಪರಿಣಾಮ ಉಂಟಾಗಲಿದೆ. ರೇಷ್ಮೆ ಕೃಷಿಯಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದ ಕೃಷಿಕರ ಮಕ್ಕಳು ನಿರುದ್ಯೋಗಿಗಳಾಗುವರು. ಸರ್ಕಾರ ಈ ಪ್ರಸ್ತಾವ ಕೈಬಿಡದಿದ್ದಲ್ಲಿ ಮಾರುಕಟ್ಟೆಗಳನ್ನು ಸಾಂಕೇತಿಕವಾಗಿ ಬಂದ್ ಮಾಡಿ ಪ್ರತಿಭಟಿಸಲಾಗುವುದು ಎಂದು ವೇದಿಕೆ ರಾಜ್ಯ ಸಂಚಾಲಕ ಮಳ್ಳೂರು ಶಿವಣ್ಣ ತಿಳಿಸಿದರು.
ವೇದಿಕೆ ಜಿಲಾ ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ, ಬೈರಾರೆಡ್ಡಿ, ದೇವರಾಜ್ ಮುನಿರಾಜು, ಲಕ್ಷ್ಮಿ ನಾರಾಯಣ್, ರಾಮಚಂದ್ರ, ರವಿಕುಮಾರ್, ನಾರಾಯಣಸ್ವಾಮಿ, ಮಂಜುನಾಥ್, ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur