ಅಮೆರಿಕದ ಸಂಶೋಧಕಿ ಶಿಡ್ಲಘಟ್ಟದಲ್ಲಿ ರೇಷ್ಮೆ ಕೃಷಿ ಅಧ್ಯಯನಕ್ಕೆ ಭೇಟಿ

- Advertisement -
- Advertisement -

Sidlaghatta : ಅಮೆರಿಕದ ರೇಷ್ಮೆ ಕೃಷಿ ಸಂಶೋಧಕಿ ತಾಬಿತ ಅವರು ಶಿಡ್ಲಘಟ್ಟ ತಾಲ್ಲೂಕಿಗೆ ಭೇಟಿ ನೀಡಿ, ಇಲ್ಲಿ ನಡೆಯುತ್ತಿರುವ ರೇಷ್ಮೆ ಕೃಷಿ ಮತ್ತು ಉದ್ಯಮದ ಬಗ್ಗೆ ಅಧ್ಯಯನ ನಡೆಸಿದರು.

ಗುರುವಾರದಂದು ಅವರು ಹಿತ್ತಲಹಳ್ಳಿ ಗ್ರಾಮದ ಹಿಪ್ಪುನೇರಳೆ ತೋಟ, ರೇಷ್ಮೆ ಹುಳು ಸಾಕಾಣಿಕೆ ಮನೆ, ಚಂದ್ರಿಕೆ ಶೆಡ್‌ಗಳನ್ನು ವೀಕ್ಷಿಸಿದರು. ಬಳಿಕ ನಗರದಲ್ಲಿ ರೇಷ್ಮೆ ನೂಲು ಬಿಚ್ಚುವ ಘಟಕ, ಆಟೋಮ್ಯಾಟಿಕ್ ರೀಲಿಂಗ್ ಯಂತ್ರ (ಎ.ಆರ್.ಎಂ), ಮಲ್ಟಿ ಎಂಡ್ ಮಿಷನ್ ಸೇರಿದಂತೆ ವಿವಿಧ ಯಂತ್ರೋಪಕರಣಗಳ ಕಾರ್ಯವೈಖರಿಯನ್ನು ನೋಡಿದರು.

ರೇಷ್ಮೆ ರೈತ ಎಚ್.ಕೆ. ಸುರೇಶ್ ಅವರು ತಾಬಿತ ಅವರಿಗೆ ಮಾಹಿತಿ ನೀಡುತ್ತಾ, ಇತ್ತೀಚಿನ ದಿನಗಳಲ್ಲಿ ಹುಳು ಸಾಕಾಣಿಕೆಯಲ್ಲಿ ಎದುರಾಗುತ್ತಿರುವ ಸಮಸ್ಯೆಗಳು, ರೋಗಗಳು ಮತ್ತು ಅವುಗಳ ನಿಯಂತ್ರಣಕ್ಕೆ ಕೈಗೊಳ್ಳುತ್ತಿರುವ ಕ್ರಮಗಳ ಕುರಿತು ವಿವರಿಸಿದರು.

ಬೇಸಾಯದೊಳಗಿನ ನಷ್ಟ-ಲಾಭಗಳು, ಬೆಲೆ ಏರಿಳಿತ, ಕೆಲಸಗಾರರ ಕೊರತೆಗಳಂತಹ ಪ್ರಚಲಿತ ಅಂಶಗಳ ಕುರಿತು ತಾಬಿತ ಅವರು ಗಮನ ನೀಡಿದರು. ನಂತರ ರೀಲಿಂಗ್ ಘಟಕಗಳಲ್ಲಿ ಯಂತ್ರಗಳ ತಾಂತ್ರಿಕತೆ, ಸರ್ಕಾರದ ಸವಲತ್ತುಗಳು ಮತ್ತು ಉದ್ಯಮಿಗಳ ಎದುರಾಗುತ್ತಿರುವ ತೊಂದರೆಗಳ ಕುರಿತೂ ಮಾಹಿತಿ ಸಂಗ್ರಹಿಸಿದರು.

ಈ ಭೇಟಿಗೆ ಕೆಎಸ್‌ಎಂಬಿಯ ಬೆನಕಪ್ಪ ಹುಬ್ಬಳ್ಳಿ ಮತ್ತು ಗೋಪಿನಾಥ್ ಕೂಡ ಹಾಜರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!