Sidlaghatta : ಶಿಡ್ಲಘಟ್ಟ ನಗರದ ಗ್ರಾಮಾಂತರ ಠಾಣೆಯ ಕೂಗಳತೆ ದೂರದಲ್ಲಿ ಮಂಗಳವಾರ ಮಧ್ಯಾಹ್ನ 11 ಗಂಟೆ ಸುಮಾರಿನಲ್ಲಿ ಅಪರಿಚಿತರು ರಹಮತ್ ನಗರದ ನಿವಾಸಿ ಫೈರೋಜ್ ಪಾಶ (42) ಎಂಬಾತನ ಮೇಲೆ ಲಾಂಗ್ ನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ.
ಫೈರೋಜ್ ಪಾಶ ಮೊಟರ್ ಬೈಕ್ ಲ್ಲಿ ಪೇಟೆಯಿಂದ ಹೋಗುತ್ತಿದ್ದಾಗ ಈತನನ್ನು ಹಿಂಬಾಲಿಸಿ ಮತ್ತೊಂದು ಬೈಕಲ್ಲಿ ಬಂದ ಮುಸುಕು ದಾರಿಗಳು ಹಿಂಬದಿಯಿಂದ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಫೈರೋಜ್ ಪಾಶಾ ನ ಮೇಲೆ ಲಾಂಗ್ ಬೀಸಿದ್ದಾರೆ. ತಪ್ಪಿಸಿಕೊಳ್ಳುವ ಯತ್ನದಲ್ಲಿ ಫೈರೋಜನ ಎಡಗೈ ಹೆಬ್ಬೆರಳು ತುಂಡಾಗಿದೆ. ತಕ್ಷಣ ಪ್ರತಿರೋಧ ತೋರಿದ ಫೈರೋಜ್, ಅಲ್ಲೇ ಇದ್ದ ಕಲ್ಲಿನಿಂದ ಪ್ರತಿ ಹಲ್ಲೆಗೆ ಯತ್ನಿಸಿದಾಗ ಅಪರಿಚಿತ ಮುಸುಕು ದಾರಿಗಳು ತಾವು ತಂದಿದ್ದ ಬೈಕ್ ಲ್ಲಿ ಪರಾರಿಯಾಗಿದ್ದಾರೆ.
ಫೈರೋಜ್ ಪಾಶನನ್ನು ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಆರೋಪಿಗಳ ಶೋಧನೆಗೆ ತೀವ್ರವಾದ ತನಿಖೆ ಕೈಗೊಂಡಿದ್ದಾರೆ.
2021 Chikkaballapur.com