Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಬಸವಪಟ್ಟಣ ಗ್ರಾಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ (University of Agriculture Sciences, Bengaluru) ಚಿಂತಾಮಣಿಯ ಕುರುಬೂರಿನ ರೇಷ್ಮೆ ಕೃಷಿ ಮಹಾವಿದ್ಯಾಲಯ (College of sericulture, Chintamani), ಬಸವಾಪಟ್ಟಣ ಹಾಲು ಉತ್ಪಾದಕರ ಸಂಘದ ಸಹಯೋಗದಲ್ಲಿ ಅಂತಿಮ ವರ್ಷದ ಬಿ.ಎಸ್ಸಿ (ಆನರ್ಸ್) ಕೃಷಿ ವಿದ್ಯಾರ್ಥಿಗಳ (B.Sc Agriculture Students) ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ 2024-25 ರ ಅಡಿಯಲ್ಲಿ, ಬರಡು ರಾಸುಗಳ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿತ್ತು
ಹೈನುಗಾರಿಕೆ ಮತ್ತು ಪಶು ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಸುರೇಶ್ ಮಾತನಾಡಿ, ಗ್ರಾಮೀಣ ಪ್ರದೇಶದ ಪ್ರಮುಖ ಆದಾಯ ಮೂಲ ಪಶುಸಂಗೋಪನೆ, ಹಾಲಿನ ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಿಸಲು ಹಸುಗಳಿಗೆ ಪ್ರೋಟಿನ್ ಯುಕ್ತ ಆಹಾರವನ್ನ ನೀಡಬೇಕು. ಇದರಿಂದ ಹಾಲಿನಲ್ಲಿ ಫ್ಯಾಟ್ ಪ್ರಮಾಣ ಹೆಚ್ಚುವುದರಿಂದ ರೈತರಿಗೆ ಹೆಚ್ಚಿನ ಆದಾಯ ಸಿಗಲಿದೆ ಎಂದು ಹೇಳಿದರು.
ಹಾಲಿನ ಉತ್ಪಾದನೆ ಹೆಚ್ಚಿಸುವುದರಿಂದ ರೈತರು ಹೆಚ್ಚಿನ ಆದಾಯ ಗಳಿಸಬಹುದು, ಕ್ಯಾಲ್ಸಿಯಂ ಮತ್ತು ಮಿನರಲ್ಸ್ ಇರುವ ನ್ಯೂಟ್ರಿಷನ್ ಆಹಾರವನ್ನ ಹಸುಗಳಿಗೆ ಕೊಡಬೇಕು. ಸೀಮೆ ಹುಲ್ಲಿನ ಜೊತೆ ದ್ವಿದಳ ಧಾನ್ಯಗಳ ಹುಲ್ಲನ್ನು ಕೊಡಬೇಕು. ಇದರ ಜೊತೆ ಅಜೋಲವನ್ನ ಕೊಡಬೇಕು. ಹಸುಗಳು ಕೊಡುವ ಹಾಲಿನ ಪ್ರಮಾಣಕ್ಕೆ ತಕ್ಕಂತೆ ಪ್ರೋಟಿನ್ ಯುಕ್ತ ಆಹಾರವನ್ನ ಕೊಡುವುದರಿಂದ ಹಸುವಿನ ಹಾಲಿನಲ್ಲಿ ಫ್ಯಾಟ್ (ಡಿಗ್ರಿ) ಹೆಚ್ಚಾಗುವುದಾಗಿ ಹೇಳಿದರು.
74 ಹಸುಗಳಿಗೆ ಚಿಕಿತ್ಸೆ ನೀಡಲಾಯಿತು. ನಾಯಿಗಳಿಗೆ ರೇಬಿಸ್ ಲಸಿಕೆಯನ್ನು ಹಾಕಿಸಲಾಯಿತು ಮತ್ತು ಕುರಿಗಳಿಗೆ ಲಸಿಕೆ ನೀಡಲಾಯಿತು.
ತೋಟಗಾರಿಕೆ ವಿಭಾಗದ ಸಹಪ್ರಾಧ್ಯಾಪಕ ಡಾ.ಶಿವಪ್ಪ, ಕೃಷಿ ಸಮಾಜ ವಿಜ್ಞಾನ ವಿಭಾಗದ ಸಹಪ್ರಾಧ್ಯಾಪಕ ಡಾ. ಶ್ರೀನಿವಾಸ ರೆಡ್ಡಿ. ಎಂ.ವಿ, ಮಳಮಾಚನಹಳ್ಳಿ ಪಶುವೈದ್ಯಾಧಿಕಾರಿ ಡಾ.ಧನಂಜಯ, ಪಶು ಅಧಿಕಾರಿಗಳು, ಮಲಮಾಚನಹಳ್ಳಿ, ತಾಲೂಕು ಸಂಚಾರಿ ಪಶುವೈದ್ಯ ಡಾ.ಪ್ರಶಾಂತ್, ಪಶುವೈದ್ಯಾಧಿಕಾರಿ ಡಾ. ನಿತಿನ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಬೈರೇಗೌಡ ಬಿ.ಎನ್, ಉಪಾಧ್ಯಕ್ಷ ಮುನೇಗೌಡ. ಬಿ.ಜಿ., ಕಾರ್ಯದರ್ಶಿ ರಾಕೇಶ್ ಬಿ.ಎಸ್, ಸಿಬ್ಬಂದಿ ಶ್ರೀರಾಮಪ್ಪ, ನಾಗರಾಜ್, ವೆಂಕಟೇಶ್, ಕೃಷಿ ವಿದ್ಯಾರ್ಥಿಗಳಾದ ಚಿನ್ಮಯಿ, ಡಿ.ಕೆ.ಸುಮಾ, ಜಿ.ಜೆ. ಗೀತಾ, ಹರ್ಷಿತ, ಗೌತಮಿ, ಜ್ಯೋತಿ, ಈಶ್ವರ್ ನಾಗರಾಜ್ ಶೆಟ್ಟಿ, ಭರತ್, ಬೀರಲಿಂಗೇಶ್, ಪರಶುರಾಮ್, ಅರ್ಬಾಜ್, ಚೇತನ್, ಬೆರ್ಲಿಗೆ ಗೌಡ, ಬೀರಲಿಂಗೇಗೌಡ, ದೇವರಾಜ್, ರೈತರು, ಗ್ರಾಮಸ್ಥರು, ರೈತ ಮಹಿಳೆಯರು ಹಾಜರಿದ್ದರು.