Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ 66/11 ಕೆವಿ ಉಪವಿದ್ಯುತ್ ಕೇಂದ್ರದಿಂದ ಹಾದುಹೋಗಿರುವ ಎಫ್-5 ಜಂಗಮಕೋಟೆ ಮತ್ತು ಎಫ್-6 ಸುಗಟೂರು ಮಾರ್ಗಗಳ ಟ್ರಕ್ ಲೈನ್ ಮಾರ್ಗಗಳ ಬದಲಾವಣೆ ಕಾಮಗಾರಿಗಳನ್ನು ನಿರ್ವಹಿಸುತ್ತಿರುವುದರಿಂದ ಜಂಗಮಕೋಟೆ 66/11 ಕೆವಿ ಉಪವಿದ್ಯುತ್ ಕೇಂದ್ರದ ಎಫ್-3 ಬೈರಸಂದ್ರ, ಎಫ್-5 ಜಂಗಮಕೋಟೆ, ಮತ್ತು ಎಫ್-6 ಸುಗಟೂರು ಮಾರ್ಗಗಳ ಮೂಲಕ ವಿದ್ಯುತ್ ಸರಬರಾಜಾಗುವ ಬೈರಸಂದ್ರ, ಜಂಗಮಕೋಟೆ, ಜಂಗಮಕೋಟೆ ಕ್ರಾಸ್, ಸುಗಟೂರು, ಸುಂಡ್ರಹಳ್ಳಿ, ತೊಟ್ಟಿಬಾವಿ, ಘಟ್ಟಮಾರನಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಫೆಬ್ರುವರಿ 4 ರಿಂದ 5 ರವರೆಗೆ ಬೆಳಗ್ಗೆ 10:00 ಗಂಟೆಯಿಂದ ಸಂಜೆ 5:00 ವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು ಗ್ರಾಹಕರು ಸಹಕರಿಸಬೇಕೆಂದು BESCOM ಎಇಇ ಬಿ.ಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.