Sidlaghatta : ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಯಂತೆಯೇ ಬಡವ ಬಲ್ಲಿದ ಭೇದವಿಲ್ಲದೇ ಅತ್ಯುತ್ತಮ ಶೈಕ್ಷಣಿಕ ವಾತಾವರಣವನ್ನು ಭಕ್ತರಹಳ್ಳಿಯ ಬಿ.ಎಂ.ವಿ ವಿದ್ಯಾ ಸಂಸ್ಥೆ (Bhaktarahalli BMV Education Trust) ಸೃಷ್ಟಿಸಿದೆ ಎಂದು ಕಾಮ್ ವಾಲ್ಟ್ ಸಾಫ್ಟ್ ವೇರ್ (Commvault) ಕಂಪೆನಿಯ CSR ಮುಖ್ಯಸ್ಥರು ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಭಕ್ತರಹಳ್ಳಿಯ BMV ವಿದ್ಯಾ ಸಂಸ್ಥೆಯಲ್ಲಿ ಗುರುವಾರ ಶಾಲೆಯ 300 ವಿದ್ಯಾರ್ಥಿಗಳಿಗೆ ಕೇಕ್ ಮತ್ತು ಸ್ಕೂಲ್ ಬ್ಯಾಗ್ ವಿತರಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಎಲ್ಲಾ ಮಕ್ಕಳಿಗೂ ನಗರದಲ್ಲಿ ಸಿಗುವಂತಹ ಶಿಕ್ಷಣ, ಸೌಲಭ್ಯವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಬಿ.ಎಂ.ವಿ ವಿದ್ಯಾ ಸಂಸ್ಥೆಯಲ್ಲಿ ನೀಡಲಾಗುತ್ತಿದೆ. ಜೊತೆಗೆ ಹಸಿರುಮಯ ಸ್ವಚ್ಛ ವಾತಾವರಣ, ಗ್ರಂಥಾಲಯ, ಕಂಪ್ಯೂಟರ್ ಲ್ಯಾಬ್ ಎಲ್ಲವನ್ನೂ ಒಳಗೊಂಡಿದೆ ಎಂದರು.
ಬಿ.ಎಂ.ವಿ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಎಲ್.ಕಾಳಪ್ಪ ಮಾತನಾಡಿ, ಕಾಮ್ ವಾಲ್ಟ್ ಸಾಫ್ಟ್ ವೇರ್ ಕಂಪೆನಿಯು ಪ್ರಸಕ್ತ ಸಾಲಿನಲ್ಲಿ ಬಿ.ಎಂ.ವಿ ವಿದ್ಯಾ ಸಂಸ್ಥೆಗೆ 23 ಲಕ್ಷ ರೂಗಳ ಹಣಕಾಸಿನ ನೆರವು ನೀಡಿದೆ. ಮೊದಲನೇ ಕಂತು 5.75 ಲಕ್ಷ ರೂಗಳನ್ನು ಸಂಸ್ಥೆಯ ಖಾತೆಗೆ ಜಮಾ ಮಾಡಿದೆ. 9 ಲಕ್ಷ ರೂಗಳ ಹಣದಲ್ಲಿ ಶಾಲೆಗೆ 60 ಲ್ಯಾಪ್ ಟಾಪ್ ಮತ್ತು ಅವುಗಳನ್ನು ಚಾರ್ಜ್ ಮಾಡಲು ಎಪ್ಪತ್ತು ಸಾವಿರ ರೂ ಬೆಲೆಯ ಅಲ್ಮೇರಾ ಸಹ ನೀಡುತ್ತಿದೆ. ನಮ್ಮ ಶಾಲೆಯ ಮಕ್ಕಳ ಶ್ರೇಯೋಭಿವೃದ್ಧಿಗೆ ಸಂಸ್ಥೆ ನೆರವಿನ ಹಸ್ತ ಚಾಚಿದೆ ಎಂದು ಹೇಳಿದರು.
ಕಾಮ್ ವಾಲ್ಟ್ ಸಾಫ್ಟ್ ವೇರ್ ಕಂಪೆನಿಯ ಆಡಳಿತ ಮುಖ್ಯಸ್ಥ ಶರತ್, ಸ್ಮೈಲ್ ಫೌಂಡೇಶನ್ ನ ಅರ್ಚನ, ಮುಖ್ಯಶಿಕ್ಷಕರಾದ ಎನ್.ಪಂಚಮೂರ್ತಿ, ವೆಂಕಟಮೂರ್ತಿ, ಟ್ರಸ್ಟಿ ಸಂತೆ ನಾರಾಯಣಸ್ವಾಮಿ ಹಾಜರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur