ಮಕ್ಕಳನ್ನು ದುಡಿಸಿಕೊಂಡರೆ 6 ತಿಂಗಳಿಂದ 2 ವರ್ಷ ಜೈಲು

- Advertisement -
- Advertisement -

Sidlaghatta : 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ ಎಂದು ತಾಲ್ಲೂಕು ಕಾರ್ಮಿಕ ನಿರೀಕ್ಷಕಿ ವಿಜಯಲಕ್ಷ್ಮಿ ಹೇಳಿದರು.

ನಗರದ ಸರ್ಕಾರಿ ಬಸ್ ನಿಲ್ದಾಣದ ಆವರಣದಲಿ ಕಾರ್ಮಿಕ ಇಲಾಖೆ ವತಿಯಿಂದ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರ ( ನಿಷೇಧ ಮತ್ತು ನಿಯಂತ್ರಣ ) ಕಾಯಿದೆ ಬಗ್ಗೆ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಸೇರಿದಂತೆ ೧೫-೧೮ ವಯಸ್ಸಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಸಿಕೊಳ್ಳುವುದು ನಿಷೇಧಿಸಲಾಗಿದೆ. ತಾಲ್ಲೂಕಿನಲ್ಲಿ ಬಾಲಕಾರ್ಮಿಕರ ಹಾಗು ಕಿಶೋರ ಕಾರ್ಮಿಕರ ಕಾರ್ಮಿಕರ ತಪಾಸಣೆ ಕಾರ್ಯ ನಿರಂತರವಾಗಿ ನಡೆಯುತ್ತಿದ್ದು ತಪಾಸಣೆ ವೇಳೆ ಬಾಲಕರನ್ನು ದುಡಿಸಿಕೊಳ್ಳುವುದು ಕಂಡುಬಂದರೆ 6 ತಿಂಗಳಿಂದ 2 ವರ್ಷದ ಜೈಲು ಶಿಕ್ಷೆ ಹಾಗು 20 ಸಾವಿರದಿಂದ 50 ಸಾವಿರ ವರೆಗಿನ ದಂಡ ವಿಧಿಸಲು ಕಾಯಿದೆಯಡಿ ಅವಕಾಶವಿದೆ ಎಂದರು.

ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸಿ ಶಿಕ್ಷಣ ಮುಂದುವರೆಸುವ ಸಲುವಾಗಿ ಜೂ ೦೧ ರಿಂದ ಜೂನ್ ೩೦ ರವರೆಗೂ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದರು.

ಶಿಡ್ಲಘಟ್ಟ ನಗರದ ಗ್ಯಾರೇಜೊಂದರಲ್ಲಿ ಕಿಶೋರ ಕಾರ್ಮಿಕನಾಗಿ ದುಡಿಯುತ್ತಿದ್ದ ಕಿಶೋರ ಕಾರ್ಮಿಕನನ್ನು ರಕ್ಷಣೆ ಮಾಡಿ ಶಾಲೆಗೆ ದಾಖಲು ಮಾಡಲಾಯಿತು.

ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕಿ ವಿಜಯಲಕ್ಷ್ಮಿ, ಬಚಪಾನ್ ಬಚಾವೋ ಆಂದೋಲನದ ರಾಜ್ಯ ಕಾರ್ಯಕ್ರಮಾಧಿಕಾರಿ ಮಹಮ್ಮದ್ ರಿಯಾಜ್, ಬಾಲಕಾರ್ಮಿಕ ಸೊಸೈಟಿಯ ಯೋಜನಾ ನಿರ್ದೇಶಕ ರಮೇಶ್, ಶಿಕ್ಷಣ ಇಲಾಖೆಯ ಬಿ.ಆರ್.ಸಿ ಕೋಆರ್ಡಿನೇಟರ್ ತ್ಯಾಗರಾಜ್, ಮತ್ತಿತರರು ಹಾಜರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!