Sidlaghatta : ಶಿಡ್ಲಘಟ್ಟ ನಗರದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಟೌನ್ SFCS ಬ್ಯಾಂಕ್‌ನ ವಾರ್ಷಿಕ ಮಹಾಸಭೆಯಲ್ಲಿ DCC Bank ಉಪಾಧ್ಯಕ್ಷ ಎ.ನಾಗರಾಜ್ ಅವರು ಮಾತನಾಡಿದರು.
ಸಹಕಾರಿ ಸಂಸ್ಥೆಗಳ ಮೂಲಕ ಯಶಸ್ವಿನಿ ಆರೋಗ್ಯ ವಿಮೆ ಯೋಜನೆಯನ್ನು (Insurance) ಶೀಘ್ರದಲ್ಲೆ ಜಾರಿ ಮಾಡಲಾಗುವುದು. ಈ ಬಗ್ಗೆ ಸರಕಾರ ಸಕಲ ಸಿದ್ದತೆಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.
DCC ಬ್ಯಾಂಕ್ ಹಾಗೂ SFCS ಬ್ಯಾಂಕುಗಳು ಎಂದರೆ ಕೇವಲ ರೈತರಿಗೆ ಹಾಗೂ ಮಹಿಳಾ ಸಂಘಗಳಿಗೆ ಸಾಲ ನೀಡುವ ಬ್ಯಾಂಕ್‌ಗಳು ಎಂದು ಭಾವಿಸಿದಂತಿದೆ. ರೈತರು ಹಾಗೂ ಮಹಿಳೆಯರು ಸಹಕಾರ ಬ್ಯಾಂಕುಗಳಲ್ಲಿ ಖಾತೆ ತೆರೆದು ಅಲ್ಲಿ ಹಣಕಾಸಿನ ವಹಿವಾಟು ನಡೆಸಬೇಕೆಂದು ಮನವಿ ಮಾಡಿದರು.
ನಾವು ಅಫೆಕ್ಸ್ ಹಾಗೂ ನಬಾರ್ಡ್ ಬ್ಯಾಂಕಿನಲ್ಲಿ ಇಡುವ ಠೇವಣಿ ಮೇಲೆ ನಮಗೆ ಸಾಲ ಸಿಗುತ್ತದೆ ಹಾಗಾಗಿ ನಾವೆಲ್ಲರೂ ಸಹಕಾರ ಸಂಘಗಳ ಬ್ಯಾಂಕ್ ಮೂಲಕ ಹಣಕಾಸಿನ ವಹಿವಾಟು ನಡೆಸಿ ಉಳಿತಾಯದ ಹಣವನ್ನು ಠೇವಣಿ ಇಟ್ಟಾಗ ಮಾತ್ರ ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ರೈತರು ಹಾಗೂ ಮಹಿಳಾ ಸಂಘಗಳಿಗೆ ಸಾಲ ಸಿಗಲು ಸಾಧ್ಯ ಎಂದು ಹೇಳಿದರು.
ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಲಾಯಿತು. ಬ್ಯಾಂಕ್‌ನ ಅಧ್ಯಕ್ಷ ಶೆಟ್ಟಹಳ್ಳಿ ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿ.ನಾರಾಯಣಸ್ವಾಮಿ, ನಿರಂಜನ್, ಭಕ್ತರಹಳ್ಳಿ ಬೈರೇಗೌಡ, ವೇಣು, ವ್ಯವಸ್ಥಾಪಕ ಆನಂದ್, ಸಿಇಒ ದೇವಿಕಾ ಸೇರಿದಂತೆ ಬ್ಯಾಂಕಿನ ನಿರ್ದೇಶಕರು, ಸದಸ್ಯರು ಹಾಜರಿದ್ದರು.