Home Sidlaghatta ಮೆಕ್ಕೆಜೋಳದ ನಡುವೆ ಗಾಂಜಾ ಸೊಪ್ಪು ಬೆಳೆದಿದ್ದ ರೈತ

ಮೆಕ್ಕೆಜೋಳದ ನಡುವೆ ಗಾಂಜಾ ಸೊಪ್ಪು ಬೆಳೆದಿದ್ದ ರೈತ

0
221

Dibburahalli, Sidlaghatta : ರೈತನೊಬ್ಬ ತನ್ನ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆ ಜೋಳದ ಬೆಳೆ ನಡುವೆ ಅಕ್ರಮವಾಗಿ ಗಾಂಜಾ ಗಿಡವನ್ನು ಬೆಳೆದಿದ್ದು ದಿಬ್ಬೂರಹಳ್ಳಿ ಠಾಣೆಯ ಪೊಲೀಸರು ದಾಳಿ ನಡೆಸಿ ಗಾಂಜಾ ಸೊಪ್ಪನ್ನು ವಶಕ್ಕೆ ಪಡೆದು ಆರೋಪಿ ಜನಮಡುಗಪ್ಪ/ಲಂಬು(55) ದಸ್ತಗಿರಿ ಮಾಡಿದ್ದಾರೆ.

ತಾಲ್ಲೂಕಿನ ದಿಬ್ಬೂರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದಿಂಬಾರ್ಲಹಳ್ಳಿ-ದಾಸಾರ್ಲಹಳ್ಳಿ ಗಡಿಭಾಗದಲ್ಲಿ ಜಿನಮಡುಗಪ್ಪ ಅವರ ಜಮೀನಿನಲ್ಲಿ ಮೆಕ್ಕೆ ಜೋಳ ಬೆಳೆಯ ನಡುವೆ ಗಾಂಜಾ ಸೊಪ್ಪನ್ನು ಬೆಳೆದಿದ್ದ. ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ಮುರಳೀಧರ್ ಮಾರ್ಗದರ್ಶನದಲ್ಲಿ ಸಿಪಿಐ ಎಂ.ಶ್ರೀನಿವಾಸ್, ದಿಬ್ಬೂರಹಳ್ಳಿ ಎಸ್‌.ಐ ಶ್ಯಾಮಲ, ವೆಂಕಟರಮಣಪ್ಪ ದಾಳಿ ನಡೆಸಿದ್ದಾರೆ.

ಸುಮಾರು ಒಂದು ಲಕ್ಷ ರೂ ಮೌಲ್ಯದಷ್ಟು ಬೆಲೆ ಬಾಳುವ 4 ಕೆಜಿಯಷ್ಟು ಗಾಂಜಾ ಸೊಪ್ಪನ್ನು ವಶಕ್ಕೆ ಪಡೆದು ಜನಮಡುಗಪ್ಪನನ್ನು ದಸ್ತಗಿರಿ ಮಾಡಿದ್ದಾರೆ. ದಿಬ್ಬೂರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!