Malamachanahalli, Sidlaghatta : ಕುಡಿದ ಮತ್ತಿನಲ್ಲಿ ಓವರ್ ಹೆಡ್ ಟ್ಯಾಂಕ್ ಮೇಲೇರಿದ ವ್ಯಕ್ತಿ ತನಗೆ 500 ರೂ ನೀಡಿದರೆ ಮಾತ್ರ ಕೆಳಗೆ ಇಳಿಯುತ್ತೇನೆ, ಇಲ್ಲವಾದರೆ ಇಲ್ಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಸಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದ ನಾಗೇಶ್ ಎಂಬ ವ್ಯಕ್ತಿ ಕುಡಿದ ಮತ್ತಿನಲ್ಲಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಂಭಾಗ ಇರುವ ಓವರ್ ಹೆಡ್ ಟ್ಯಾಂಕ್ ಮೇಲೆ ಏರಿ, ನನಗೆ ಐದು ನೂರು ರೂಪಾಯಿಗಳನ್ನು ನೀಡಿದರೆ ಮಾತ್ರ ಕೆಳಗೆ ಇಳಿಯುತ್ತೇನೆ, ಇಲ್ಲವಾದರೆ ಇಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಗ್ರಾಮಸ್ಥರನ್ನು ಬೆದರಿಸಿದ್ದಾನೆ.
ಕೂಡಲೇ ಗ್ರಾಮಸ್ಥರು 112 ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ನಾಗೇಶನ ಮನವೊಲಿಸಿ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.