Home Sidlaghatta ರೈತರ ಮೇಲೆ ಗುಂಡು ಹಾರಿಸಿದ ಸಕಲೇಶ್‌ ಕುಮಾರ್‌ನನ್ನು ಗಡಿಪಾರು ಮಾಡಲು ಒತ್ತಾಯ

ರೈತರ ಮೇಲೆ ಗುಂಡು ಹಾರಿಸಿದ ಸಕಲೇಶ್‌ ಕುಮಾರ್‌ನನ್ನು ಗಡಿಪಾರು ಮಾಡಲು ಒತ್ತಾಯ

0
210

Sidlaghatta : ರೈತರ ಮೇಲೆ ಗುಂಡು ಹಾರಿಸಿ ಪ್ರಾಣ ಬೆದರಿಕೆ ಹಾಕಿದ ಉದ್ಯಮಿ ಸಕಲೇಶ್ ಕುಮಾರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಸಿರು ಸೇನೆ ರೈತ ಸಂಘದ ನೇತೃತ್ವದ ರೈತರು ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನಾಕಾರರು ಕೆಲ ಸಮಯ ಸಾಂಕೇತಿಕ ಪ್ರತಿಭಟನೆ ನಡೆಸಿದ ಬಳಿಕ, “ಸಕಲೇಶ್ ರೌಡಿಯಂತೆ ವರ್ತಿಸಿದ್ದು, ಅವರನ್ನು ಜಿಲ್ಲೆಗೆ ಗಡಿಪಾರು ಮಾಡಬೇಕು, ಅವರ ವಿರುದ್ಧ ರೌಡಿಶೀಟರ್ ತೆರೆಯಬೇಕು” ಎಂದು ಘೋಷಣೆಗಳನ್ನು ಕೂಗಿದರು.

ರೈತ ನಾಯಕ ಪ್ರತೀಶ್ ಮಾತನಾಡಿ, “ಮಂಚೇನಹಳ್ಳಿ ಹತ್ತಿರದ ಕನಗಾನಕೊಪ್ಪದ ಬಳಿ ಗಣಿಗಾರಿಕೆಗೆ ಅನುಮತಿ ದೊರೆತಿದ್ದು, ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಇತ್ತೀಚೆಗೆ ಸಕಲೇಶ್ ತಮ್ಮ ಮಂದಿಯೊಂದಿಗೆ ಬಂದು ರೈತರ ವಿರೋಧದ ನಡುವೆಯೂ ರಸ್ತೆ ನಿರ್ಮಾಣ ಆರಂಭಿಸಿದಾಗ, ರೈತರು ತಡೆದರು. ಈ ಸಂದರ್ಭದಲ್ಲಿ ಸಕಲೇಶ್ ರೈತರ ಮೇಲೆ ಗನ್‌ನಿಂದ ಗುಂಡು ಹಾರಿಸಿ ಬೆದರಿಕೆ ಹಾಕಿದ್ದಾರೆ,” ಎಂದರು.

ಅಲ್ಲದೇ, “ನಮ್ಮ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ ಅವರ ಮೇಲೂ ಕಿರುಕುಳವಿದೆ. ಇದೊಂದು ದಬ್ಬಾಳಿಕೆ. ಸರ್ಕಾರ ಈ ಬಗ್ಗೆ ಗಂಭೀರವಾಗಿ ವಿಚಾರಿಸಬೇಕು,” ಎಂದು ಹೇಳಿದರು.

ಗಣಿಗಾರಿಕೆ ಅನುಮತಿಯು ಕೂಡ ರದ್ದಾಗಬೇಕು ಎಂಬ ಒತ್ತಾಯದೊಂದಿಗೆ ಅವರು ತಹಶೀಲ್ದಾರ್ ಬಿ.ಎನ್.ಸ್ವಾಮಿ ಅವರಿಗೆ ಮನವಿ ಪತ್ರ ನೀಡಿದರು. ಸಂಘದ ಜಿಲ್ಲಾ ಅಧ್ಯಕ್ಷ ಮುನಿಕೆಂಪಣ್ಣ, ನವೀನ್ ಕುಮಾರ್, ಮುನೇಗೌಡ ಸೇರಿದಂತೆ ಹಲವು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!