25.1 C
Bengaluru
Thursday, November 7, 2024

ಮೊದಲ ಶಾಸಕ ದಿ.ಜಿ.ಪಾಪಣ್ಣ ಸ್ಮರಣಾರ್ಥ ಸಮುದಾಯ ಭವನ

- Advertisement -
- Advertisement -

Sidlaghatta : ಚಿಕ್ಕಬಳ್ಳಾಪುರ ಹಾಗೂ ಶಿಡ್ಲಘಟ್ಟ ಅಖಂಡ ವಿಧಾನಸಭಾ ಕ್ಷೇತ್ರದ ಮೊದಲ ಶಾಸಕ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಮಳ್ಳೂರಿನ ದಿ.ಜಿ.ಪಾಪಣ್ಣ ಅವರ ಸ್ಮರಣಾರ್ಥ ನಿರ್ಮಾಣವಾಗುತ್ತಿರುವ ಸಮುದಾಯ ಭವನಕ್ಕೆ ಅಗತ್ಯ ನೆರವು ನೀಡುವುದಾಗಿ ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಭರವಸೆ ನೀಡಿದರು.

ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಸಹಕಾರ ಕ್ಷೇತ್ರದ ಧುರೀಣ, ಸ್ವಾತಂತ್ರ್ಯ ಹೋರಾಟಗಾರ ದಿ.ಜಿ.ಪಾಪಣ್ಣ ಅವರ ಸ್ಮರಣಾರ್ಥದ ಸಮುದಾಯ ಭವನದ ಕಾಮಗಾರಿ ವೀಕ್ಷಿಸಿ ಸಮುದಾಯ ಭವನಕ್ಕೆ ಅಗತ್ಯ ಇರುವ ಹಣಕಾಸಿನ ನೆರವನ್ನು ನೀಡುತ್ತೇನೆಂದರು.

ಗ್ರಾಮಸ್ಥರಿಂದ ಜಿ.ಪಾಪಣ್ಣ ಅವರ ಜೀವನ, ಸಾಧನೆಗಳ ಬಗ್ಗೆ ತಿಳಿದುಕೊಂಡ ಸೀಕಲ್ ರಾಮಚಂದ್ರಗೌಡ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ಸಹಕಾರಿ ತತ್ವದ ಮೇಲೆ ಆರೋಗ್ಯ ಕೇಂದ್ರ, ಶಾಲೆ ಆರಂಭಿಸಿದ ಕೀರ್ತಿ ಪಾಪಣ್ಣ ಅವರದ್ದು. ಚಿಕ್ಕಬಳ್ಳಾಪುರ ಹಾಗೂ ಶಿಡ್ಲಘಟ್ಟ ಅಖಂಡ ವಿಧಾನಸಭಾ ಕ್ಷೇತ್ರದ ಮೊಟ್ಟ ಮೊದಲ ಶಾಸಕರಾಗಿದ್ದ ಅವರ ಸಾಧನೆ ಅಪಾರ ಎಂದು ಬಣ್ಣಿಸಿದರು.

ಅವರಂತ ನಾಯಕರ ಬದುಕು ನಮ್ಮೆಲ್ಲರಿಗೂ ಮಾದರಿ ಆಗಬೇಕು, ಅವರ ತತ್ವ ಆದರ್ಶಗಳನ್ನು ಸ್ವಲ್ಪವಾದರೂ ನಾವು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು, ಅದಕ್ಕಾಗಿ ಅವರ ಸ್ಮರಣಾರ್ಥ ಸಮುದಾಯ ಭವನ ನಿರ್ಮಾಣದ ಅಗತ್ಯವಿದೆ. ಅವರ ಬದುಕನ್ನು ನೆನಪಿಸುವ ಭಾವಚಿತ್ರಗಳಲ್ಲಿ ಇಲ್ಲಿ ಅಳವಡಿಸಿ ಎಂದು ಸಲಹೆ ನೀಡಿದರು.

ರೇಷ್ಮೆ ಕೃಷಿ ಹಿತ ರಕ್ಷಣಾ ವೇದಿಕೆಯ ರಾಜ್ಯ ಸಂಚಾಲಕ ಮಳ್ಳೂರು ಶಿವಣ್ಣ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸೀಕಲ್ ಆನಂದ್ ಗೌಡ, ನಿಕಟ ಪೂರ್ವ ಅಧ್ಯಕ್ಷ ಸುರೇಂದ್ರ ಗೌಡ, ರಾಮಕೃಷ್ಣಪ್ಪ ಹಾಜರಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!