Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಗಂಜಿಗುಂಟೆ (Ganjigunte) ಗ್ರಾಮದಲ್ಲಿ ಮೇ 27ರಂದು ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಆರ್.ಲತಾ (Chikkaballapur Deputy commissioner DC R Latha) ಗ್ರಾಮ ವಾಸ್ತವ್ಯ ಹೂಡಿ ಗ್ರಾಮಸ್ಥರ ಕುಂದು ಕೊರತೆಗಳ ಅಹವಾಲು ಸ್ವೀಕರಿಸಲಿದ್ದಾರೆ.
‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ಅಂಗವಾಗಿ ಎಲ್ಲ ತಾಲ್ಲೂಕುಗಳ ವಿವಿಧ ಗ್ರಾಮಗಳಲ್ಲಿ ಆಯಾ ತಹಶೀಲ್ದಾರರು ಗ್ರಾಮವಾಸ್ತವ್ಯ ಹೂಡಲಿದ್ದು ಚಿಕ್ಕಬಳ್ಳಾಪುರ (Chikkaballapur) ತಾಲ್ಲೂಕಿನ ಅರೂರು ಗ್ರಾಮ, ಬಾಗೇಪಲ್ಲಿ (Bagepalli) ತಾಲ್ಲೂಕಿನ ಕೊತ್ತಕೋಟೆ, ಚಿಂತಾಮಣಿ (Chintamani) ತಾಲ್ಲೂಕು ಕಂಗಾನಹಳ್ಳಿ, ಗುಡಿಬಂಡೆ (Gudibande) ತಾಲ್ಲೂಕು ಕೇರೇಹಳ್ಳಿ, ಗೌರಿಬಿದನೂರು (Gauribidanur) ತಾಲ್ಲೂಕಿನ ಇಡಗೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur