Sidlaghatta : ತಾಯಿ Phone ಕೊಡಿಸಲಿಲ್ಲ ಎಂದು ಬಾಲಕಿಯೊಬ್ಬಳು (Girl) ಕೃಷಿ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ತಾಲ್ಲೂಕಿನ ದೊಣ್ಣಹಳ್ಳಿ ಗ್ರಾಮದಲ್ಲಿ ನಡೆದಿದೆ.
ದೊಣ್ಣಹಳ್ಳಿ ಗ್ರಾಮದ ರಜನಿ (17) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಮೂರು ದಿನಗಳ ಹಿಂದೆಯೇ ಆತ್ಮಹತ್ಯೆ ಈ ಬಾಲಕಿ ಮಾಡಿಕೊಂಡಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮೇ 21 ರಂದು ಬೆಳಿಗ್ಗೆ ತಾಯಿ ಜೊತೆ ಮುನಿಸಿಕೊಂಡು ಮನೆ ತೊರೆದಿದ್ದಳು ರಜನಿ. ಸಂಬಂಧಿಕರ ಮನೆಗೆ ಹೋಗಿರಬಹುದೆಂದು ಸುಮ್ಮನಾಗಿದ್ದರು ತಾಯಿ ಮುನಿರತ್ನ. ಆದರೆ ಸೋಮವಾರ ಬೆಳಗ್ಗೆ ಮನೆ ಸಮೀಪದ ತೋಟದ ಕೃಷಿ ಹೊಂಡದಲ್ಲಿ ಶವ ಪತ್ತೆಯಾಗಿದ್ದು, ರಜನಿ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ.
15 ವರ್ಷಗಳ ಹಿಂದೆ ಪತಿ ವೆಂಕಟೇಶ್ ಹಾಗೂ 16 ವರ್ಷಗಳ ಹಿಂದೆ ತನ್ನ ಮಗ ಮಂಜು ಅವರನ್ನ ಕಳೆದುಕೊಂಡಿದ್ದ ಮುನಿರತ್ನ, ಇದೀಗ ಕೊನೆಯದಾಗಿ ಇದ್ದ ಮಗಳನ್ನೂ ಕಳೆದುಕೊಂಡು ರೋದಿಸುತ್ತಿರುವ ದೃಶ್ಯ ಮನಕಲಕುವಂತಿತ್ತು. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.