ಶಿಡ್ಲಘಟ್ಟ ತಾಲ್ಲೂಕಿನ ಹಂಡಿಗನಾಳದ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ 2020-21ನೇ ಸಾಲಿನ ವಾರ್ಷಿಕ ಮಹಾ ಸಭೆ ಡೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಸಂಘದ ಅಧ್ಯಕ್ಷೆ ಸುಜಾತಗೋಪಾಲಕೃಷ್ಣ ಅಧ್ಯಕ್ಷತೆಯಲ್ಲಿ ಉಪಾಧ್ಯಕ್ಷೆ ಮಂಜುಳಲಕ್ಷ್ಮೀನಾರಾಯಣ್ ಅವರು 2019-20ನೇ ಸಾಲಿನ ಜಮಾ ಖರ್ಚು ವರದಿಯನ್ನು ಮಂಡಿಸಿದರು. ಕಳೆದ ಸಾಲಿನಲ್ಲಿ 8 ಲಕ್ಷ ರೂ.ನಿವ್ವಳ ಲಾಭಗಳಿಸಿರುವುದಾಗಿ ಘೋಷಿಸಿದರು.
ಮಹಿಳಾ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಕೆಲ ಮಹಿಳಾ ಸದಸ್ಯರ ಬದಲು ಅವರ ಗಂಡಂದಿರು ಬಂದು ಸಭೆಯಲ್ಲಿ ಭಾಗವಹಿಸಿ ದರ್ಬಾರು ನಡೆಸಿದರು.
ಈ ಹಿಂದಿನ ಆಡಳಿತ ಮಂಡಳಿಯ ಅವಯಲ್ಲಿ ಸೀಮೆ ಹಸುಗಳ ಖರೀಗೆಂದು ನೀಡಿದ್ದ ಸಾಲದ ಹಣ ಮರುಪಾವತಿ ಆಗದೇ ಇರುವ ಬಗ್ಗೆ ಸಭೆಯಲ್ಲಿ ಚರ್ಚೆಗೆ ಕಾರಣವಾಯಿತು.
ವಿಸ್ತರಣಾಕಾರಿ ಗುಲಾಬ್ ಜಾನ್, ಡೇರಿಯ ನಿರ್ದೇಶಕರಾದ ದ್ಯಾವಮ್ಮ, ನಾರಾಯಣಮ್ಮ, ಮಂಜುಳಮ್ಮ, ಮುನಿರತ್ನಮ್ಮ, ಲಕ್ಷ್ಮಮ್ಮ, ಸರಿತಾ, ಪದ್ಮಜಾ, ಸರಸ್ವತಮ್ಮ, ನಾರಾಯಣಮ್ಮ, ಗಾಯಿತ್ರಿ, ಡೇರಿಯ ಸಿಇಒ ರೂಪಮ್ಮ ಸೇರಿ ಎಲ್ಲ ಸದಸ್ಯರು ಭಾಗವಹಿಸಿದ್ದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur