Home Sidlaghatta ಕರವೇ ತಾಲ್ಲೂಕು, ನಗರ, ಯುವ ಹಾಗು ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ

ಕರವೇ ತಾಲ್ಲೂಕು, ನಗರ, ಯುವ ಹಾಗು ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ

0
208

Sidlaghatta : ಕನ್ನಡ ನಾಡು, ನುಡಿ, ನೆಲ, ಜಲ ರಕ್ಷಣೆಗಾಗಿ ದುಡಿಯುತ್ತಿರುವ ಸಂಘಟನೆಗಳ ಕಾರ್ಯ ಶ್ಲಾಘನೀಯ ಎಂದು ಕರವೇ ತಾಲ್ಲೂಕು ಅಧ್ಯಕ್ಷ ಮುನಿರಾಜ್ (ಕುಟ್ಟಿ) ಹೇಳಿದರು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಂ.ಆರ್.ಲೋಕೇಶ್ ಸೂಚನೆ ಮೇರೆಗೆ ಶುಕ್ರವಾರ ಕರವೇ ತಾಲ್ಲೂಕು, ನಗರ, ಯುವ ಹಾಗು ಮಹಿಳಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ನಾಡಿನ ನೆಲ, ಜಲ, ನಾಡು, ನುಡಿಯ ವಿಷಯ್ಕೆ ಧಕ್ಕೆ ಬಂದಾಗ ಹೋರಾಟ ಮಾಡಲು ಸದಾ ಮುಂಚೂಣಿಯಲ್ಲಿರುವ ಕನ್ನಡ ಪರ ಸಂಘಟನೆಗಳನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ. ಪರ ಭಾಷೆಯವರಿಂದ ನಮ್ಮ ನೆಲ, ಜಲ, ಬಾಷೆಯ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ತಡೆಗಟ್ಟಬೇಕಾದರೆ ಯುವಕರು ಹೆಚ್ಚು ಹೆಚ್ಚು ಸಂಘಟಿತರಾಗಬೇಕಿದೆ ಎಂದರು.

ಈ ಸಂದರ್ಭದಲ್ಲಿ ಕರವೇ ತಾಲ್ಲೂಕು, ನಗರ, ಯುವ ಹಾಗು ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ತಾಲ್ಲೂಕು ಘಟಕ :

ತಾಲ್ಲೂಕು ಅಧ್ಯಕ್ಷರಾಗಿ ಮುನಿರಾಜ್(ಕುಟ್ಟಿ), ಕಾರ್ಯದರ್ಶಿಯಾಗಿ ಮುರಳಿ, ಮಣಿ, ಸಂಚಾಲಕರಾಗಿ ಶಶಿಕುಮಾರ್, ರಾಜೇಶ್, ಪ್ರಧಾನ ಸಂಚಾಲಕರಾಗಿ ಚನ್ನಕೃಷ್ಣಪ್ಪ, ಉಪಾಧ್ಯಕ್ಷರಾಗಿ ಆಸೀಫ್, ಗಿರೀಶ್, ಸಂಘಟನಾ ಕಾರ್ಯದರ್ಶಿಯಾಗಿ ದೇವರಾಜ್, ಖಜಾಂಚಿಯಾಗಿ ಸುಹೇಲ್, ಸಹಕಾರ್ಯದರ್ಶಿಯಾಗಿ ಮುರಳಿ, ಸಮಘಟನಾ ಕಾರ್ಯದರ್ಶಿಯಾಗಿ ಚಿಕನ್ ಅಪ್ಸರ್ ಆಯ್ಕೆಯಾಗಿದ್ದಾರೆ.

ನಗರ ಘಟಕ :

ನಗರ ಘಟಕದ ಅಧ್ಯಕ್ಷರಾಗಿ ಶ್ರಿಕಾಂತ್, ಉಪಾಧ್ಯಕ್ಷರಾಗಿ ಎನ್.ಗಿರೀಶ್ ಕುಮಾರ್, ಸಾದಿಕ್, ಸಂ. ಕಾರ್ಯದರ್ಶಿಯಾಗಿ ಶ್ರೀರಾಮ್, ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಕೆ.ಮಂಜುನಾಥ್, ಮಾಧ್ಯಮ ಸಲಹೆಗಾರರಾಗಿ ಅರುಣ್‌ಕುಮಾರ್.ಕೆ.ಖಜಾಂಚಿ ನೌಶಾದ್, ಕಾರ್ಯದರ್ಶಿಯಾಗಿ ಮುಜಾಯಿದ್, ಸಂಚಾಲಕರಾಗಿ ಸದ್ದಾಂ ಆಯ್ಕೆಯಾಗಿದ್ದಾರೆ

ಯುವ ಘಟಕ :

ಯುವ ಘಟಕದ ಅಧ್ಯಕ್ಷರಾಗಿ ನಂದತೇಜಾ, ಉಪಾಧ್ಯಕ್ಷರಾಗಿ ರಕ್ಷಿತ್, ಕಾರ್ಯದರ್ಶಿಯಾಗಿ ಶಿವಕುಮಾರ, ಸಹಕಾರ್ಯದರ್ಶಿಯಾಗಿ ಮನು, ಸಂ.ಕಾರ್ಯದರ್ಶಿಯಾಗಿ ಶ್ರೀನಾಥನಾಯಕ, ಕಾರ್ಯದರ್ಶಿಯಾಗಿ ಪ್ರಸನ್ನ ಆಯ್ಕೆಯಾಗಿದ್ದಾರೆ.

ಮಹಿಳಾ ಘಟಕ :

ಮಹಿಳಾ ಘಟಕದ ಅಧ್ಯಕ್ಷರಾಗಿ ಮಧುಲತಾ, ಉಪಾಧ್ಯಕ್ಷರಾಗಿ ಲಕ್ಷ್ಮಿ, ಕಾರ್ಯದರ್ಶಿಯಾಗಿ ನಸಿಮಾ, ಸಹಕಾರ್ಯದರ್ಶಿಯಾಗಿ ಮಂಜಮ್ಮ, ಸಂಚಾಲಕರಾಗಿ ಮೀನಾಕ್ಷಿ ಆಯ್ಕೆಯಾಗಿದ್ದಾರೆ.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!