- Advertisement -
- Advertisement -
- Advertisement -
- Advertisement -
Sidlaghatta : ಸರ್ಕಾರಿ KSRTC ಬಸ್ ಡಿಕ್ಕಿ ಹೊಡೆದು ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು-ಮಳ್ಳೂರು ನಡುವಿನ ಗಂಗಮ್ಮನ ಕುಂಟೆ ಬಳಿ ನಡೆದಿದೆ. ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದ ಶ್ರೀರಾಮಪ್ಪ(65) ಮೃತಪಟ್ಟ ದುರ್ದೈವಿ.
ಮೇಲೂರಿನಿಂದ ಮಳ್ಳೂರು ಕಡೆಗೆ ನಡೆದು ಹೋಗುತ್ತಿದ್ದ ಶ್ರೀರಾಮಪ್ಪ ಅವರಿಗೆ ಬೆಂಗಳೂರಿನಿಂದ ಮೇಲೂರು ಮಾರ್ಗವಾಗಿ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದ್ದು, ಬಸ್‌ನ ಚಕ್ರ ಶ್ರೀರಾಮಪ್ಪನ ತಲೆಯ ಮೇಲೆ ಹರಿದ ಕಾರಣ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
For Daily Updates WhatsApp ‘HI’ to 7406303366
- Advertisement -