Sidlaghatta : ಶಿಡ್ಲಘಟ್ಟ ತಾಲ್ಲೂಕಿನ H Cross(ಕುಂಭಿಗಾನಹಳ್ಳಿ) ಗ್ರಾಮ ಪಂಚಾಯಿತಿಯ ಕಾಳನಾಯಕನಹಳ್ಳಿ (Kalanayakanahalli) ಹಾಗೂ ಮಳ್ಳೂರು-2 (Mallur) ಗ್ರಾಮದ ಗ್ರಾಮ ಪಂಚಾಯಿತಿ ಕ್ಷೇತ್ರಗಳಿಗೆ ಸೋಮವಾರ ಉಪ ಚುನಾವಣೆ ನಡೆಯಿತು.
ಕಾಳನಾಯಕನಹಳ್ಳಿಯಲ್ಲಿ 499 ಮತದಾರರ ಪೈಕಿ 446 ಮಂದಿ ಮತ ಚಲಾಯಿಸಿದ್ದು 89.37% ರಷ್ಟು ಮತದಾನ ನಡೆಯಿತು.
ಮಳ್ಳೂರಲ್ಲಿ 1273 ಮಂದಿ ಮತದಾರರ ಪೈಕಿ 975 ಮತದಾರರು ಮತ ಚಲಾಯಿಸಿದ್ದು 76.9% ರಷ್ಟು ಮತದಾನ ನಡೆದಿದೆ.
ಕಾಳನಾಯಕನಹಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಸ್.ರಾಜಣ್ಣ ಅವರು ಕೋವಿಡ್‌ಗೆ ತುತ್ತಾಗಿ ಮೃತಪಟ್ಟಿದ್ದರೆ, ಮಳ್ಳೂರು-2 ಗ್ರಾಮ ಪಂಚಾಯಿತಿ ಕ್ಷೇತ್ರದಲ್ಲಿ ವಿಜೇತರಾಗಿದ್ದ ರೂಪ ಅವರು ಅಂಗನವಾಡಿ ಕಾರ‍್ಯಕರ್ತೆಯಾಗಿ ಕಾರ‍್ಯನಿರ್ವಹಿಸುತ್ತಿದ್ದು ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಎರಡೂ ಸ್ಥಾನಗಳಿಗೂ ಚುನಾವಣೆ ನಡೆದಿದೆ.
ಕಾಳನಾಯಕನಹಳ್ಳಿ ಗ್ರಾಮ ಪಂಚಾಯಿತಿ ಕ್ಷೇತ್ರದ ಚುನಾವಣಾಕಾರಿಯಾಗಿ ಎಚ್.ಸಿ.ಮುನಿರಾಜು ಹಾಗೂ ಮಳ್ಳೂರು-2 ಕ್ಷೇತ್ರದ ಚುನಾವಣಾಕಾರಿಯಾಗಿ ಡಿ.ಲಕ್ಷ್ಮಯ್ಯ ಕಾರ‍್ಯನಿರ್ವಹಿಸಿದರು.
ತಹಶೀಲ್ಧಾರ್ ಬಿ.ಎಸ್.ರಾಜೀವ್ ಅವರು ಎರಡೂ ಮತಗಟ್ಟೆಗಳಿಗೂ ಭೇಟಿ ನೀಡಿ ಪರಿಶೀಲಿಸಿದರು. ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಡಿಸೆಂಬರ್ 30 ರಂದು ಗುರುವಾರ ತಾಲ್ಲೂಕು ಕಚೇರಿಯಲ್ಲಿ ಎರಡೂ ಕ್ಷೇತ್ರಗಳ ಮತ ಎಣಿಕೆ ಹಾಗೂ ಫಲಿತಾಂಶ ಘೋಷಣೆ ಆಗಲಿದೆ.