Sidlaghatta : ಶಿಡ್ಲಘಟ್ಟ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ NSS ಘಟಕದಿಂದ ತಾಲ್ಲೂಕಿನ ಅಬ್ಲೂಡು (Abludu) ಗ್ರಾಮದಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಸೇವಾ ವಿಶೇಷ ಶಿಬಿರದಲ್ಲಿ ನಗರ ಠಾಣೆಯ (Town Police Station) SI ಸತೀಶ್ ಮಾತನಾಡಿದರು.
ಹೇಗೋ ಜೀವನ ನಡೆಸುವುದಲ್ಲ, ಮಾನವೀಯ, ನೈತಿಕತೆಯ ಮೌಲ್ಯಗಳೊಂದಿಗೆ ಬದುಕು ಸಾಗಿಸಬೇಕು. ಓದಿ ಉದ್ಯೋಗ ಪಡೆದು ಬದುಕು ಸಾಗಿಸುವ ಜೀವನ ನಿಮ್ಮದಾಗಬಾರದು. ನಮ್ಮನ್ನು ಬೆಳೆಸಿದ ಸಮಾಜಕ್ಕೂ ನಮ್ಮ ಕೊಡುಗೆ ಇರಬೇಕು. ಸಮಾಜಮುಖಿಯಾಗದ ಬದುಕು ನಿಷ್ಪ್ರಯೋಜಕ ಎಂದು ಅವರು ತಿಳಿಸಿದರು.
ಮಾನವೀಯತೆ ನೈತಿಕತೆಯ ಮೌಲ್ಯಗಳನ್ನು ಅಳವಡಿಸಿಕೊಂಡ ಬದುಕು ನಿಮ್ಮದಾಗಬೇಕು. ಆ ಮೂಲಕ ಈ ದೇಶವನ್ನು ಕಟ್ಟುವ ಕೆಲಸ ನಡೆಯುತ್ತದೆ ಎಂದರು.
ಎನ್‌ಎಸ್‌ಎಸ್ ಕಾರ‍್ಯಕ್ರಮಾಧಿಕಾರಿ ಎಚ್.ಸಿ.ಮುನಿರಾಜು, ಅಬ್ಲೂಡು ಗ್ರಾಮ ಪಂಚಾಯಿತಿ ಪಿಡಿಒ ವಜ್ರೇಶ್‌ಕುಮಾರ್, ಪ್ರೊಬೆಷನರಿ ಎಸ್‌ಐಗಳಾದ ಸುನಿಲ್ ಕುಮಾರ್, ಆಕಾಶ್ ಪತ್ತಾರ್, ಮುಖಂಡ ಬೈರೇಗೌಡ ಹಾಜರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur