ಶ್ರೀ ಪೂಜಮ್ಮದೇವಿ ಹೂವಿನ ಕರಗ ಮಹೋತ್ಸವ

- Advertisement -
- Advertisement -

Sidlaghatta : ಅನಾದಿ ಕಾಲದಿಂದಲೂ ನೆರವೇರಿಸಿಕೊಂಡು ಬಂದಂತಹ ನಗರದ ಪೂಜಮ್ಮ ದೇವಿಯ ಕರಗಮಹೋತ್ಸವವನ್ನು ಭಾನುವಾರ ರಾತ್ರಿ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಸಂಪ್ರದಾಯ ಆಚಾರಗಳಂತೆ ದೇವಾಲಯದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡಿ ನಂತರ ಹೂವಿನ ಕರಗವನ್ನು ಹೊರಲಾಯಿತು.

ನಗರದ ಶ್ರೀ ಪೂಜಮ್ಮ ದೇವಿಯ ಕರಗವನ್ನು ಮುಳಬಾಗಿಲಿನ ವಿಜಯ್‌ಕುಮಾರ್ ರವರು ಹೊತ್ತಿದ್ದರು. ಶಿರದ ಮೇಲೆ ಕಳಶ ಹೊತ್ತು ಕುಣಿಯುವ ಕಲೆಯಾಗಿದ ಕರಗದಾಚರಣೆ ಎಂದರೆ ಆದಿಶಕ್ತಿಯ ಆಚರಣೆ ಎಂದು ನಂಬಲಾಗಿದೆ. ದೇವಸ್ಥಾನಕ್ಕೆ ಮೂರು ಸುತ್ತು ಪ್ರದರ್ಶನ ಮಾಡಿ ನಂತರ ಮಾರಮ್ಮ ವೃತ್ತದಲ್ಲಿ ಮತ್ತು ಕೋಟೆ ವೃತ್ತದಲ್ಲಿ ಆಯೋಜಿಸಲಾಗಿದ್ದ ವಾದ್ಯಗೋಷ್ಠಿಯ ವೇದಿಕೆಯಲ್ಲಿ ಕರಗ ಹೊತ್ತ ವಿಜಯ್‌ ಕುಮಾರ್ ತಮಟೆಯ ಶಬ್ದಕ್ಕೆ ಹೆಜ್ಜೆ ಹಾಕಿ ಕುಣಿದಾಡಿದರು. ಅಲ್ಲಿದ್ದ ಸಾರ್ವಜನಿಕರು ಕರಗವನ್ನು ನೋಡಿ ಮನಸೋತಿದ್ದಲ್ಲದೇ ವಾದ್ಯಗೋಷ್ಠಿಯ ತಂಡದವರ ಸಂಗೀತಕ್ಕೆ ತಕ್ಕಂತೆ ಕುಣಿದರು.

ದೇವಿಯ ಕರಗ ವೀಕ್ಷಿಸಲು ಬರೀ ನಗರವಲ್ಲದೇ ತಾಲ್ಲೂಕಿನಾದ್ಯಂತ ಜನರು ಆಗಮಿಸಿದ್ದರು. ವಾದ್ಯಗೋಷ್ಠಿಯಲ್ಲಿ ಹಿಂದಿ, ಕನ್ನಡ, ತೆಲುಗು, ತಮಿಳು ಹಾಡುಗಳನ್ನು ವಾದ್ಯಗೋಷ್ಠಿ ತಂಡದವರು ಹಾಡಿ ನೃತ್ಯಗಳನ್ನು ಮಾಡಿದ್ದನ್ನು ನೋಡಿ ಕಣ್ತುಂಬಿಸಿಕೊಂಡರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!