Sidlaghatta: ತಾಲ್ಲೂಕಿನ ಸಾದಲಿ 66/11 ಕೆವಿ ವಿದ್ಯುತ್ ಉಪಕೇಂದ್ರದಲ್ಲಿ ನವೆಂಬರ್ 24 ಭಾನುವಾರ ತ್ರೈಮಾಸಿಕ ನಿರ್ವಹಣೆ ಕಾರ್ಯ ನಿರ್ವಹಿಸಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಸಾದಲಿ, ಗಡಿಮಿಂಚೇನಹಳ್ಳಿ, ಸೊಣಗಾನಹಳ್ಳಿ, ಎಸ್. ವೆಂಕಟಾಪುರ, ನಲ್ಲಪನಹಳ್ಳಿ, ಮಿಟ್ಟೇಮರಿ, ಎಸ್. ದೇವಗಾನಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ನ.24 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಗ್ರಾಹಕರು ಇದಕ್ಕೆ ಸಹಕರಿಸಬೇಕೆಂದು BESCOM ಗ್ರಾಮಾಂತರ ಉಪ ವಿಭಾಗದ AEE ಬಿ.ಪ್ರಭು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.