31.8 C
Bengaluru
Saturday, February 28, 2026

ತಾಲ್ಲೂಕಿನಾದ್ಯಂತ ಬಿರುಸಿನ ಪಲ್ಸ್ ಪೋಲಿಯೊ ಅಭಿಯಾನ, ಶೇ 98.22ರಷ್ಟು ಸಾಧನೆ

- Advertisement -
- Advertisement -

Sidlaghatta : ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಪಲ್ಸ್ ಪೋಲಿಯೊ ಕಾರ್ಯಕ್ರಮದ ಎರಡನೇ ದಿನಕ್ಕೆ ಶೇ 98.22 ರಷ್ಟು ಪ್ರಗತಿ ಆಗಿದೆ. ಗ್ರಾಮೀಣ ಭಾಗದಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮ ಮಂಗಳವಾರ ಸಂಜೆಗೆ ಅಂತ್ಯವಾಗಲಿದ್ದು ಶಿಡ್ಲಘಟ್ಟ ನಗರದಲ್ಲಿ ಬುಧವಾರ ಅಂತ್ಯಗೊಳ್ಳಲಿದೆ.

ಫೆ.3 ರಂದು ಭಾನುವಾರ ಪೋಲಿಯೊ ಅಭಿಯಾನಕ್ಕೆ ಚಾಲನೆ ದೊರೆತಿದ್ದು ನಗರ ಪ್ರದೇಶದಲ್ಲಿ ವಾರ್ಡುವಾರು, ಗ್ರಾಮೀಣ ಭಾಗದಲ್ಲಿ ಗ್ರಾಮವಾರು ತೆರೆದಿರುವ ಬೂತ್‌ಗಳಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತರು ಪೋಲಿಯೊ ಹನಿ ಹಾಕಿದ್ದಾರೆ.

ನಗರದಲ್ಲಿ ಮನೆ ಮನೆಗೂ ಭೇಟಿ ನೀಡಿ ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಕಾರ್ಯಕ್ರಮ ಮುಂದುವರೆದಿದ್ದು ಬುಧವಾರ ಅಂತ್ಯಗೊಳ್ಳಲಿದೆ. ಗ್ರಾಮೀಣ ಭಾಗದಲ್ಲಿಯೂ ಮನೆ ಮನೆ ಭೇಟಿ ಮಂಗಳವಾರ ಸಂಜೆಗೆ ಅಂತ್ಯಗೊಂಡಿದೆ.

ನಗರ ಭಾಗದಲ್ಲಿ 26 ಮತ್ತು ಗ್ರಾಮಿಣ ಭಾಗದಲ್ಲಿ 80 ಬೂತ್‌ಗಳನ್ನು ತೆರೆದಿದ್ದು 24,500 ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಗುರಿ ಇರಿಸಿಕೊಳ್ಳಲಾಗಿದೆ.

ಬಶೆಟ್ಟಹಳ್ಳಿ, ದಿಬ್ಬೂರಹಳ್ಳಿ, ಇ.ತಿಮ್ಮಸಂದ್ರ, ಗಂಜಿಗುಂಟೆ, ಹೇಮಾರ್ಲಹಳ್ಳಿ, ಜಂಗಮಕೋಟೆ, ಕುಂದಲಗುರ್ಕಿ, ಕೆ.ಮುತ್ತುಕದಹಳ್ಳಿ, ಮೇಲೂರು, ಸಾದಲಿ, ವೈ.ಹುಣಸೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಶಿಡ್ಲಘಟ್ಟ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಪೋಲಿಯೋ ಕಾರ್ಯಕ್ರಮ ನಡೆಯುತ್ತಿದೆ.

ಗಂಜಿಗುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 5 ವರ್ಷದೊಳಗಿನ 795 ಕಡಿಮೆ ಸಂಖ್ಯೆಯ ಮಕ್ಕಳಿದ್ದರೆ, ಮೇಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ 2815 ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಗುರಿ ಹಾಕಿಕೊಳ್ಳಲಾಗಿದೆ.

ಸೋಮವಾರದ ಅಂತ್ಯಕ್ಕೆ ಗಂಜಿಗುಂಟೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಶೇ 101.38 ರಷ್ಟು ಗುರಿ ಮೀರಿ ಸಾಧಿಸಲಾಗಿದೆ. ಜಂಗಮಕೋಟೆ ಪಿ.ಎಚ್‌.ಸಿ ವ್ಯಾಪ್ತಿಯಲ್ಲಿ ಕಡಿಮೆ ಪ್ರಮಾಣದ ಶೇ 97.55 ರಷ್ಟು ಕಡಿಮೆ ಸಾಧನೆಯಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!