Sidlaghatta : ಶಿಡ್ಲಘಟ್ಟ ನಗರದ ಅಶೋಕ ರಸ್ತೆಯಲ್ಲಿರುವ ಶಿಡ್ಲಘಟ್ಟ ಟೌನ್ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿ (SFCS) ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಮಂಜುನಾಥ ತಿಳಿಸಿದ್ದಾರೆ.
ಡಿಸೆಂಬರ್ 26 ರ ಭಾನುವಾರ ಬೆಳಗ್ಗೆ 9 ಗಂಟೆಯಿಂದ 4 ಗಂಟೆಯವರೆಗೂ ಚುನಾವಣೆಯನ್ನು ನಿಗದಿಪಡಿಸಲಾಗಿತ್ತು. ನಾಮಪತ್ರ ವಾಪಸ್ ಪಡೆಯಲು ಡಿಸೆಂಬರ್ 20 ಕಡೆ ದಿನವಾಗಿತ್ತು. ಆದರೆ ಚುನಾವಣೆ ನಡೆಸುವ ಅವಕಾಶವೇ ಒದಗದಂತೆ ಅವಿರೋಧ ಆಯ್ಕೆ ನಡೆದಿದೆ.
ಆಡಳಿತ ಮಂಡಳಿಯ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಾಲಗಾರರಲ್ಲದ ಕ್ಷೇತ್ರದಿಂದ ಪ್ರಭಾವತಿ, ಠೇವಣಿದಾರರ ಕ್ಷೇತ್ರದಿಂದ ಎ.ನಾಗರಾಜ್, ಸಾಲಗಾರ ಕ್ಷೇತ್ರದಿಂದ ಸಾಮಾನ್ಯ ಮಂಜುನಾಥ, ಬಿ.ನಾರಾಯಣಸ್ವಾಮಿ, ಕೆ.ಎಂ.ನರಸಿಂಹಮೂರ್ತಿ, ಪಿ.ಎನ್.ಪ್ರಶಾಂತ್, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಟಿ.ವಿ.ನಾರಾಯಣಪ್ಪ, ಪರಿಶಿಷ್ಠ ಪಂಗಡ ಮೀಸಲಿನ ಕ್ಷೇತ್ರದಿಂದ ಎನ್.ನರಸಿಂಹಯ್ಯ, ಹಿಂದುಳಿದ ವರ್ಗ ಮೀಸಲು ಪ್ರವರ್ಗ ಎ ದಿಂದ ಜಿ.ಎನ್.ರಾಮಚಂದ್ರಪ್ಪ, ಪ್ರವರ್ಗ ಬಿ ದಿಂದ ಕೆ.ವೆಂಕಟೇಶಪ್ಪ, ಹಾಗೂ ಮಹಿಳಾ ಮೀಸಲು ಸ್ಥಾನಗಳಿಗೆ ಎಂ.ಶೋಭಾರಾಣಿ, ನಳಿನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.