Wednesday, March 29, 2023
HomeSidlaghattaಒಂದೇ ರಾತ್ರಿ ಮೂರು ಗ್ರಾಮಗಳಲ್ಲಿ ಕುರಿಗಳ ಕಳ್ಳತನ

ಒಂದೇ ರಾತ್ರಿ ಮೂರು ಗ್ರಾಮಗಳಲ್ಲಿ ಕುರಿಗಳ ಕಳ್ಳತನ

- Advertisement -
- Advertisement -
- Advertisement -
- Advertisement -

ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಒಂದೇ ರಾತ್ರಿ ಮೂರು ಗ್ರಾಮಗಳಲ್ಲಿ ಕುರಿಗಳ ಕಳ್ಳತನ ನಡೆಸಿದ್ದು, ಸಿಸಿ ಕ್ಯಾಮೆರಾದಲ್ಲಿ ಕಳ್ಳತನದ ದೃಶ್ಯಗಳು ಸೆರೆಯಾಗಿವೆ.

 ಕಾಕಚೊಕ್ಕಂಡಹಳ್ಳಿಯ ರೆಡ್ಡಿ ಅವರಿಗೆ ಸೇರಿರುವ 6 ಕುರಿಗಳು ಮತ್ತು ನಾರಾಯಣಗೌಡ ಅವರ 2 ಮೇಕೆಗಳು, ನಾಗಮಂಗಲ ಗ್ರಾಮದ ಎನ್.ಎಂ.ನಾಗರಾಜು ಅವರ 8 ಕುರಿಗಳನ್ನು ಕಳ್ಳತನ ಮಾಡಿ ನಂತರ ಹೊಸಪೇಟೆ ಗ್ರಾಮದ ಮುನಿರಾಜು ಅವರ ಮನೆಯಲ್ಲಿ ಕುರಿಗಳನ್ನು ಕಳ್ಳತನ ಮಾಡಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಈ ದೃಶ್ಯಗಳೆಲ್ಲ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿವೆ.

 ಈ ಘಟನೆ ನಡೆದಿರುವುದು ಕಳೆದ ಮಂಗಳವಾರದ ರಾತ್ರಿ. ಈ ಪ್ರಕರಣವು ಗ್ರಾಮಾಂತರ ಠಾಣೆಯಲ್ಲಿ ಮಾರ್ಚ್ 23 ರಂದು ದಾಖಲಾಗಿದೆ. ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿರುವುದನ್ನು ನೋಡಿಯೂ ಇನ್ನೂ ಕಳ್ಳರನ್ನು ಪೊಲೀಸರು ಹಿಡಿದಿಲ್ಲ. ಅಲ್ಲಲ್ಲಿ ಈ ರೀತಿಯ ಕಳ್ಳತನಗಳು ಈ ನಡುವೆ ಹೆಚ್ಚಾಗಿದೆ. ಈ ಬಗ್ಗೆ ಸಾರ್ವಜನಿಕರು ಭಯಭೀತರಾಗಿದ್ದಾರೆ. ಪೊಲೀಸರು ಚುರುಕಾಗಿ ಕೆಲಸ ಮಾಡಿದಲ್ಲಿ ಕಳ್ಳತನಗಳು ನಿಲ್ಲುತ್ತವೆ ಎಂದು ಸಾರ್ವಜನಿಕರು ಅಭಿಪ್ರಾಯಪಡುತ್ತಾರೆ.

0.00 avg. rating (0% score) - 0 votes
- Advertisement -
RELATED ARTICLES

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
- Advertisment -

Most Popular

error: Content is protected !!