Home Sidlaghatta ₹600 ದಾಟಿದ ರೇಷ್ಮೆಗೂಡಿನ ಬೆಲೆ

₹600 ದಾಟಿದ ರೇಷ್ಮೆಗೂಡಿನ ಬೆಲೆ

0
139

Sidlaghatta : ವಾತಾವರಣದ ಏರುಪೇರು ನಡುವೆ ರೇಷ್ಮೆ ಗೂಡಿನ ಬೆಲೆ ₹600ರ ಗಡಿ ದಾಟಿದ್ದು, ರೇಷ್ಮೆಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ. ಸೋಮವಾರ ಮಳಮಾಚನಹಳ್ಳಿಯ ರೈತ ಜಯರಾಮ್ ಬೆಳೆದಿರುವ ರೇಷ್ಮೆ ಗೂಡು ಗರಿಷ್ಠ ದರ ₹608 ಕ್ಕೆ ಮಾರಾಟವಾಗಿದೆ.

ಕಳೆದ ಜುಲೈನಲ್ಲಿ ₹350ರ ಆಸುಪಾಸಿನಲ್ಲಿದ್ದ ಬೆಲೆ ಈಗ ಸರಾಸರಿ ₹550ಗೆ ಮಾರಾಟವಾಗುತ್ತಿದೆ. ಇದರಿಂದ ರೇಷ್ಮೆಹುಳುವಿನ ಸಾಕಾಣಿಕೆಗಾಗಿ ರೇಷ್ಮೆ ಕೃಷಿಕರು ಉತ್ಸಾಹಿತರಾಗಿದ್ದಾರೆ.

ಸಾಮಾನ್ಯವಾಗಿ ಗೂಡಿನ ಬೆಲೆ ₹400ರ ಮೇಲೆ ಹರಾಜಾಗುತ್ತದೆ. ಆದರೆ, ರೇಷ್ಮೆ ಗೂಡಿನ ಗುಣಮಟ್ಟ ಹಾಗೂ ಮಾರುಕಟ್ಟೆಗೆ ಆವಕವಾಗುತ್ತಿರುವ ಗೂಡಿನ ಪ್ರಮಾಣ ಕಡಿಮೆಯಾಗಿರುವುದರಿಂದ ರೇಷ್ಮೆ ಬೆಳೆಗಾರರು ಉಲ್ಲಸಿತರಾಗಿದ್ದಾರೆ. ಹೀಗಾಗಿ ಗೂಡಿನ ಬೆಲೆ ₹600ರ ಗಡಿ ದಾಟಿದೆ ಎಂದು ರೇಷ್ಮೆಗೂಡು ಮಾರುಕಟ್ಟೆಯ ಸಹಾಯಕ ನಿರ್ದೇಶಕ ತಿಮ್ಮರಾಜು ತಿಳಿಸಿದರು.

ರೇಷ್ಮೆಗೆ ಉತ್ತಮ ಬೆಲೆ ಸಿಗದೆ ಹಲವು ರೈತರು ರೇಷ್ಮೆ ಕೃಷಿಯಿಂದ ವಿಮುಖರಾಗಿದ್ದಾರೆ. ಈಗ ಉತ್ತಮ ಬೆಲೆ ಸಿಗುತ್ತಿರುವುದರಿಂದ ಮತ್ತೆ ರೇಷ್ಮೆ ಕೃಷಿಗೆ ಮುಂದಾಗುತ್ತಿದ್ದಾರೆ.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!