Home Sidlaghatta ರೋಗಿಗೆ ಆರ್ಥಿಕ ನೆರವು

ರೋಗಿಗೆ ಆರ್ಥಿಕ ನೆರವು

0
161

Sidlaghatta : ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿರುವ ತಾಲ್ಲೂಕಿನ ವೈ ಹುಣಸೇನಹಳ್ಳಿ ಗ್ರಾಮದ ಜಗದೀಶ್ ಹಾಗು ಆರತಿ ದಂಪತಿಯ ಪುತ್ರ ತನ್ಮಯ್ ತೇಜ್ ನಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಮಂಜೂರಾದ 40 ಸಾವಿರ ರೂ ಸಹಾಯಧನದ ಮಂಜೂರಾತಿ ಪತ್ರವನ್ನು ಜಿಲ್ಲಾ ನಿರ್ದೇಶಕ ಪ್ರಶಾಂತ್.ಸಿ.ಎಸ್ ಶುಕ್ರವಾರ ವಿತರಿಸಿದರು.

ಜಿಲ್ಲಾ ನಿರ್ದೇಶಕ ಪ್ರಶಾಂತ್.ಸಿ.ಎಸ್ ಮಾತನಾಡಿ ನಾಲ್ಕು ವರ್ಷದ ತನ್ಮಯ್ ತೇಜ್ ಕಳೆದ ಕೆಲ ವರ್ಷಗಳಿಂದ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಮಗುವಿನ ಪೋಷಕರು ಮಗುವಿನ ಚಿಕಿತ್ಸೆಗಾಗಿ ಸಹಾಯ ಮಾಡುವಂತೆ ಮನವಿ ಮಾಡಿದ್ದ ಹಿನ್ನಲೆಯಲ್ಲಿ ಪೂಜ್ಯರಾದ ಡಾ.ವೀರೇಂದ್ರ ಹೆಗ್ಗಡೆ ಯವರು 40 ಸಾವಿರ ಹಣವನ್ನು ಮಂಜೂರು ಮಾಡಿದ್ದಾರೆ ಎಂದರು.

For Daily Updates WhatsApp ‘HI’ to 7406303366

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!