ಶಿಡ್ಲಘಟ್ಟ ತಾಲ್ಲೂಕಿನ 98 ಕುಟುಂಬಗಳಿಗೆ ಮಂಗಳವಾರ ವಾತ್ಸಲ್ಯ ಕಿಟ್ ಅನ್ನು ವಿತರಣೆ ಮಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ (SKDRDP – Shri Kshethra Dharmasthala Rural Development Project) ಜಿಲ್ಲಾ ನಿರ್ದೇಶಕ ಸಿ.ಎಸ್.ಪ್ರಶಾಂತ್ ಮಾತನಾಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯಾದಾದ್ಯಂತ ಸಾವಿರಾರು ಆಶಕ್ತ, ಅನಾಥ, ಕಡುಬಡವ, ದುರ್ಬಲ ಕುಟುಂಬಗಳಿಗೆ ಪ್ರತಿ ತಿಂಗಳು 750 ರಿಂದ 1000 ವರೆಗೆ ಮಾಶಾಸನ ವಿತರಣೆ ಮಾಡುತ್ತಿದೆ. ಪ್ರತಿ ತಿಂಗಳು ಧರ್ಮಸ್ಥಳ ಸಂಸ್ಥೆಯಿಂದ ರಾಜ್ಯಾದ್ಯಂತ 12,000 ಮಂದಿ ಮಾಶಾಸನ ಪಡೆಯುವ ಫಲಾನುಭವಿಗಳಿದ್ದಾರೆ. ವೃದ್ಧ ಕಡುಬಡವ ಕುಟುಂಬಗಳಿಗೆ ಏನಾದರೂ ಸಹಾಯ ಮಾಡಬೇಕು ಎನ್ನುವ ತಾಯಿ ಹೃದಯದ ಮಾತೃಶ್ರೀಯವರು ತಮ್ಮ ಕಾರ್ಯಕರ್ತರ ಮೂಲಕ ಸರ್ವೇ ನಡೆಸಿ, ಬಡವರಿಗೆ ದಿನಬಳಕೆಗೆ ಬೇಕಾದ ಪಾತ್ರೆ, ಚಾಪೆ, ದಿಂಬು, ಹೊದಿಕೆ, ಬಟ್ಟೆ, ಸೋಪು, ಹಾಗೂ ಪೌಷ್ಟಿಕ ಆಹಾರ ವಾದ ಪುಷ್ಟಿ ಇತ್ಯಾದಿ ವಸ್ತುಗಳನ್ನು ವಾತ್ಸಲ್ಯ ಕಿಟ್ ರೂಪದಲ್ಲಿ ನೀಡಿದ್ದು, ಅದನ್ನು ವಿತರಿಸುತ್ತಿರುವುದಾಗಿ ಅವರು ಹೇಳಿದರು.
ದುರ್ಬಲ ವರ್ಗದವರ ಆರ್ಥಿಕ ಪರಿಸ್ಥಿತಿಯನ್ನು ಅರಿತು ಅವರಿಗೆ ಸಹಾಯ ಮಾಡುವುದಕ್ಕಾಗಿ ದಿನನಿತ್ಯ ಬಳಕೆಯ ವಸ್ತುಗಳನ್ನು ಸಹ ನೀಡುವ ಮೂಲಕ ಅವರ ಜೀವನ ನಿರ್ವಹಣೆಗೆ ಸಂಸ್ಥೆಯು ಕೈಜೋಡಿಸಿ ನಿಂತಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಸುಮಂಗಲಾ, ಕೃಷಿ ಅಧಿಕಾರಿ ಹರೀಶ್, ಮೇಲ್ವಿಚಾರಕರಾದ ದಿನೇಶ್, ನವೀನ್, ದಯಾನಂದ್, ನಾಗರಾಜ್, ಅನಿತಾ, ಚೇತನ್, ಆಶಾ, ಶ್ರೀನಿವಾಸ್ ಹಾಗೂ ಎಂಜಿನಿಯರ್ ಅರುಣ್ ಹಾಜರಿದ್ದರು
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur