23.3 C
Bengaluru
Thursday, June 19, 2025

‘ಮಾತೃ ವಂದನ’ ನೃತ್ಯದಲ್ಲಿ ಶಿಡ್ಲಘಟ್ಟದ ಎಸ್‌ಆರ್ ಡ್ಯಾನ್ಸ್ ಅಕಾಡೆಮಿಯ ಸಾಧನೆ

- Advertisement -
- Advertisement -

Sidlaghatta : ವಿಶ್ವ ಅಮ್ಮಂದಿರ ದಿನದ ಅಂಗವಾಗಿ ಬೆಂಗಳೂರಿನ ಗೊಟ್ಟಿಗೆರೆಯಲ್ಲಿ ನಾಟ್ಯಲೀಲ ಟ್ರಸ್ಟ್ ವತಿಯಿಂದ ಆಯೋಜಿಸಲಾದ ‘ಮಾತೃ ವಂದನ’ ನೃತ್ಯ ಕಾರ್ಯಕ್ರಮದಲ್ಲಿ ಶಿಡ್ಲಘಟ್ಟದ SR ಡ್ಯಾನ್ಸ್ ಅಕಾಡೆಮಿಯ ನೃತ್ಯಪಟುಗಳು ಗಮನ ಸೆಳೆದಿದ್ದಾರೆ. ಈ ವಿಶೇಷ ನೃತ್ಯೋತ್ಸವವು ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆಯುವ ಗೌರವವನ್ನು ಸಂಪಾದಿಸಿದೆ.

ಅಮ್ಮಂದಿರಿಗೆ ನೃತ್ಯದ ಮೂಲಕ ನಮನ ಸಲ್ಲಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಯ್ದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭರತನಾಟ್ಯದಲ್ಲಿ ಭಾಗವಹಿಸಿದರು. ಸಮೂಹವಾಗಿ ನಿರಂತರವಾಗಿ 7 ನಿಮಿಷಗಳ ಕಾಲ ಭರತನಾಟ್ಯ ಪ್ರದರ್ಶನೆಯು ನಡೆದಿದ್ದು, ಇದು ರಾಜ್ಯ ಮಟ್ಟದ ದಾಖಲೆ ಆಗಿದೆ.

ಎಸ್‌ಆರ್ ಡ್ಯಾನ್ಸ್ ಅಕಾಡೆಮಿಯ ನೃತ್ಯಗುರು ಎಸ್.ಎಂ. ಶಿಲ್ಪ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿನಿಯರಾದ ರಶ್ಮಿಕ, ನಳಿನ, ನೇಹ, ಕಾವ್ಯ, ಬಿಂಬನ, ಶುಜನ್ಯ, ಯಶ್ವಿತ, ಹೇಮಲತಾ, ರಾಧಿಕ ಹಾಗೂ ಬೃಂಧ ನೃತ್ಯವನ್ನು ಪ್ರದರ್ಶಿಸಿದರು. ಅವರ ಈ ಸಾಧನೆಗೆ ಕಾರ್ಯಕ್ರಮ ಆಯೋಜಕರು ಹಾಗೂ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ತಂಡದಿಂದ ವಿಶೇಷ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಿದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.
Captcha verification failed!
CAPTCHA user score failed. Please contact us!
error: Content is protected !!