Sidlaghatta : ಅಕ್ಟೋಬರ್ 12 ರಿಂದ 13 ರವರೆಗೆ ಮೇಲೂರು 66/11 ಕೆವಿ ಉಪವಿದ್ಯುತ್ ಕೇಂದ್ರದ ಎಫ್-1 ಟೆಲಿಫೋನ್ ಎಕ್ಸ್‌ಚೇಂಜ್, ಎಫ್-2 ಮೇಲೂರು ಮತ್ತು ಎಫ್-3 ಕಂಬದಹಳ್ಳಿ ವಿದ್ಯುತ್ ಮಾರ್ಗಗಳ ವಾಹಕ ಬದಲಾವಣೆ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಈ ವಿದ್ಯುತ್ ಮಾರ್ಗಗಳ ಮೂಲಕ ವಿದ್ಯುತ್ ಸರಬರಾಜಾಗುವ ಮೇಲೂರು, ಮಳ್ಳೂರು, ಮುತ್ತೂರು ಕಾಚಹಳ್ಳಿ, ಕಂಬದಹಳ್ಳಿ, ಗಂಗನಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಅಕ್ಟೋಬರ್ 12 ರಿಂದ 13 ರವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುವುದರಿಂದ ಗ್ರಾಹಕರು ಸಹಕರಿಸಬೇಕೆಂದು BESCOM ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -
- Advertisement -