Sidlaghatta : ಶಿಡ್ಲಘಟ್ಟ ನಗರದ ವಾಸವಿ ರಸ್ತೆಯ (Vasavi Street) ಟಿಎಲ್ ಸುಬ್ರಮಯ್ಯ ಶೆಟ್ಟಿ ರವರ ಮನೆಯಲ್ಲಿ ಶನಿವಾರ ಮುಂಜೆನೆ ಮನೆಯಲ್ಲಿ ಕಳ್ಳತನ ನಡೆದಿದೆ.
ಕೆಲವೇ ದಿನಗಳ ಹಿಂದಷ್ಟೆ ಇದೇ ಬೀದಿಯಲ್ಲಿ ಜೋಡಿ ಕೊಲೆ ನಡೆದಿದ್ದು, ಆ ಘಟನೆಯನ್ನು ಜನತೆ ಮರೆಯುವ ಮುನ್ನವೇ ಇದೀಗ ಅದೇ ಬೀದಿಯ ಮನೆಯಲ್ಲಿ ಕಳ್ಳತನ ಆಗಿದ್ದು ಜನ ಭಯ ಭೀತರಾಗಿದ್ದಾರೆ .
ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಹಿಂಬಾಗಿಲು ಮುರಿದು ಮನೆಯಲ್ಲಿದ್ದ ಮೂರು ಚೀಲಗಳಲ್ಲಿ ಇದ್ದ ಹಿತ್ತಾಳೆ ಪಾತ್ರೆಗಳು, ತಾಮ್ರದ ಹಂಡೆ ಮುಂತಾದವುಗಳನ್ನು ಕದ್ದುಕೊಂಡು ಹೋಗಿದ್ದಾರೆ .
ನಗರದ ಪೋಲಿಸ್ ಠಾಣೆಯಲ್ಲಿ ಟಿ.ಎಸ್.ಭದ್ರಿನಾಥ್ ದೂರನ್ನು ದಾಖಲಿಸಿದ್ದಾರೆ. ರಾತ್ರಿ ಗಸ್ತು ಹೆಚ್ಚಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಸಿಪಿಐ ಧರ್ಮೇಗೌಡ ಬೇಟಿ ನೀಡಿದ್ದರು.