Sidlaghatta : ಸರ್ಕಾರದಿಂದ ಉಚಿತವಾಗಿ ನೀಡಲಾಗುವ ಔಷಧಿ ಸಾಮಗ್ರಿಗಳು ಸದುಪಯೋಗವಾಗಬೇಕು ಹಾಗೂ ಇಲಾಖೆಯಲ್ಲಿನ ಭ್ರಷ್ಟತೆ ನಿಲ್ಲಬೇಕು. ಪಶು ಆಸ್ಪತ್ರೆಯಲ್ಲಿ ಉಚಿತವಾಗಿ ನೀಡುವ ಲಸಿಕೆಗಳನ್ನು ನಾಮಫಲಕದಲ್ಲಿ ಪ್ರಕಟಿಸಬೇಕು ಎಂದು ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಸದಸ್ಯರು ಶನಿವಾರ ಪಶುವೈದ್ಯಕೀಯ ಆಸ್ಪತ್ರೆಯ ಸಹಾಯಕ ನಿರ್ದೇಶಕರಿಗೆ ಮನವಿಯನ್ನು ಸಲ್ಲಿಸಿದರು.
ನಾಯಿಗಳಿಗೆ ರೇಬೀಸ್ ಚುಚ್ಚುಮದ್ದು ಹಾಕಿಸಲು ಹೋದಾಗ ವೈದ್ಯರು ಹೊರಗಡೆ ಔಷಧಿಯ ಅಂಗಡಿಯಲ್ಲಿ ತರುವಂತೆ ತಿಳಿಸುತ್ತಿದ್ದಾರೆ. ಕೋವಿಡ್ 19 ರ ಪರಿಣಾಮ ಗ್ರಾಮೀಣ ಹಾಗೂ ನಗರದ ಜನರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಈ ಸಂದರ್ಭದಲ್ಲಿ ಉಚಿತವಾಗಿ ನೀಡುವ ಔಷಧಿಗಳನ್ನು ಆಸ್ಪತ್ರೆಯಲ್ಲಿ ನೀಡಲಾಗದಿರುವುದು ಇಲಾಖೆಯ ಭಷ್ಟತೆಯನ್ನು ಪ್ರದರ್ಶಿಸುತ್ತದೆ. ಹೊರಗಡೆ ಔಷಧಿ ಅಂಗಡಿ ಮಾಲೀಕರೊಂದಿಗೆ ಕಮಿಷನ್ ದಂಧೆ ಇರುವ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆ ಆಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಸರ್ಕಾರದಿಂದ ನೀಡಲಾಗುವ ಔಷಧಿ ಮತ್ತಿತರೆ ಸವಲತ್ತುಗಳ ಸದ್ಭಳಕೆಯಾಗಬೇಕು. ಅವ್ಯವಹಾರವನ್ನು ತಡೆಯಬೇಕು ಎಂದು ಅವರು ಒತ್ತಾಯಿಸಿದರು.
ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ತಾಲ್ಲೂಕು ಅಧ್ಯಕ್ಷ ಜಿ.ವಿ.ಮಂಜುನಾಥ, ಉಪಾಧ್ಯಕ್ಷ ಅಂಬರೀಷ್, ನಗರ ಘಟಕದ ಅಧ್ಯಕ್ಷ ಮಧುಕುಮಾರ್, ಗೌರವಾಧ್ಯಕ್ಷ ಮುನಿಕೃಷ್ಣ, ಪ್ರಭಾಕರ್, ಶರತ್ ಬಾಬು, ಮೂರ್ತಿ, ಶ್ರೀನಿವಾಸ್ ಹಾಜರಿದ್ದರು.
For Daily Updates WhatsApp ‘HI’ to 7406303366
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur