ವಿಧಾನಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆ: 96.09% ಮತದಾನ

- Advertisement -
- Advertisement -

Sidlaghatta : ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಸೋಮವಾರ ನಡೆದ ಚುನಾವಣೆಯು ಶಿಡ್ಲಘಟ್ಟದಲ್ಲಿ ಯಾವುದೆ ಅಡ್ಡಿ ಆತಂಕವಿಲ್ಲದೆ ಸುಸೂತ್ರವಾಗಿ ನಡೆಯಿತು.

ನಗರದ ತಾಲೂಕು ಕಚೇರಿಯ ಸಭಾಂಗಣದಲ್ಲಿ ನಡೆದ ಮತದಾನದಲ್ಲಿ ಒಟ್ಟು 487 ಮತದಾರರ ಪೈಕಿ 259 ಪುರುಷ, 209 ಮಹಿಳಾ ಮತದಾರರು ಮತದಾನ ಮಾಡಿದ್ದು ಶೇ 96.09ರಷ್ಟು ಮತದಾನವಾಗಿದೆ. 

ಬೆಳಗ್ಗೆ 8 ಗಂಟೆಯಿಂದಲೆ ಮತದಾನ ಆರಂಭವಾಯಿತಾದರೂ ಮತದಾರರ ಸಂಖ್ಯೆ ಕಡಿಮೆಯಿರುವ ಕಾರಣ ಒಬ್ಬೊಬ್ಬರಾಗಿ ಶಿಕ್ಷಕ, ಶಿಕ್ಷಕಿಯರು ಆಗಮಿಸಿ ಮತದಾನ ಮಾಡಿದರು.

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಪರವಾಗಿ ಬಿಜೆಪಿ ಮತ್ತು ಜೆಡಿಎಸ್‌ನ ಮುಖಂಡರು, ಡಿ.ಟಿ.ಶ್ರೀನಿವಾಸ್ ಪರವಾಗಿ ಕಾಂಗ್ರೆಸ್‌ನ ಮುಖಂಡರು ಮತದಾನದ ಕಡೆಯಗಳಿಗೆಯವರೆಗೂ ಮತಯಾಚಿಸಿದರು. ಪಕ್ಷೇತರ ಅಭ್ಯರ್ಥಿ ವಿನೋದ್ ಶಿವರಾಜ್ ಪರವಾಗಿಯೂ ಹಲವರು ಮತಯಾಚನೆ ನಡೆಸಿದರು.

ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಬಿ.ಎನ್.ಸ್ವಾಮಿ ಕಾರ್ಯನಿರ್ವಹಿಸಿದರೆ, ಸಿಪಿಐ ಎಂ.ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿತ್ತು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!