Saturday, April 20, 2024
HomeSidlaghattaಪುನೀತ್ ರಾಜ್‍ಕುಮಾರ್ ಕನ್ನಡ ಸಾಹಿತ್ಯ ಬಳಗ ಉದ್ಘಾಟನೆ

ಪುನೀತ್ ರಾಜ್‍ಕುಮಾರ್ ಕನ್ನಡ ಸಾಹಿತ್ಯ ಬಳಗ ಉದ್ಘಾಟನೆ

- Advertisement -
- Advertisement -
- Advertisement -
- Advertisement -

Sidlaghatta : ಶಿಡ್ಲಘಟ್ಟ ನಗರದ ಡಾಲ್ಫಿನ್ ವಿದ್ಯಾಸಂಸ್ಥೆಯಲ್ಲಿ (Dolphin Public School) ಪುನೀತ್ ರಾಜ್‍ಕುಮಾರ್ ಕನ್ನಡ ಸಾಹಿತ್ಯ ಬಳಗವನ್ನು (Puneeth Rajkumar Kannada Sahitya Balaga) ಉದ್ಘಾಟಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ”ಡಾ.ರಾಜ್ ಕುಮಾರ್ ರವರ ಚಲನಚಿತ್ರಗಳಲ್ಲಿ ಉತ್ತಮ ಸಾಹಿತ್ಯ, ಕಥೆ ಮತ್ತು ಮಾನವೀಯ ಮೌಲ್ಯಗಳು ಇರುತ್ತಿತ್ತು, ಹಾಗೆ ಕನ್ನಡ ಭಾಷೆಯ ಪರವಾದ ಹೋರಾಟಗಳಲ್ಲಿ ಡಾ.ರಾಜ್ ಕುಮಾರ್ ಮತ್ತು ಕುಟುಂಬ ಸದಾ ಬೆಂಬಲವಾಗಿ ಇದೆ” ಎಂದು ತಿಳಿಸಿದರು.

ಕೇವಲ 46 ವರ್ಷಗಳ ಜೀವಿತಾವಧಿಯಲ್ಲಿ ಕನ್ನಡ ಚಲನ ಚಿತ್ರರಂಗದಲ್ಲಿ, ನಾಯಕನಟನಾಗಿ, ಹಿನ್ನೆಲೆ ಗಾಯಕನಾಗಿ, ದೂರದರ್ಶನ ನಿರೂಪಕನಾಗಿ ಮತ್ತು ಸಿನಿಮಾ ನಿರ್ಮಾಪಕನಾಗಿ ಗುರುತಿಸಿಕೊಂಡು ಕನ್ನಡ ಚಲನಚಿತ್ರರಂಗದಲ್ಲಿ ತಮ್ಮ ಛಾಪನ್ನು ಒತ್ತಿದವರು ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್. ಬಾಲನಟನಾಗಿ 1985 ರಲ್ಲಿ ಬೆಟ್ಟದ ಹೂ ಚಲನಚಿತ್ರ ರಾಮು ಪಾತ್ರಕ್ಕೆ ಅತ್ತ್ಯುತ್ತಮ ಬಾಲ ಕಲಾವಿದನಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರಾಗಿದ್ದರು.

ಮೈಸೂರಿನ ಶಕ್ತಿ ಧಾಮ ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗಾಗಿ ಸದಾ ಸೇವೆ ಸಲ್ಲಿಸುತ್ತಿದ್ದರು. ಕರ್ನಾಟಕ ಸರ್ಕಾರದ ವಿವಿಧ ಯೋಜನೆಗಳ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಕೆ.ಎಂ.ಎಫ್ ನಂದಿನಿ ಹಾಲು ಮತ್ತು ಉತ್ಪನ್ನಗಳಿಗೆ ರಾಯಭಾರಿಯಾಗಿ ಯಾವುದೇ ಸಂಭಾವನೆಯನ್ನು ಪಡೆಯದೆ ತಮ್ಮ ಸೇವೆ ಸಲ್ಲಿಸಿದ್ದಾರೆ. ಅನೇಕ ಸಾಮಾಜಿಕ ಚಟುವಟಿಕೆಗಳಲ್ಲಿ ಪುನೀತ್ ರಾಜ್‍ಕುಮಾರ್ ತಮ್ಮನ್ನು ತೊಡಗಿಸಿಕೊಂಡು ಕೋಟ್ಯಂತರ ಕನ್ನಡಿಗರಿಗೆ ಆದರ್ಶಪ್ರಾಯರಾಗಿದ್ದಾರೆ ಎಂದರು.

ಡಾಲ್ಫಿನ್ ಸಂಸ್ಥೆಯ ಅಧ್ಯಕ್ಷ ಎ. ನಾಗರಾಜ್, ವ್ಯವಸ್ಥಾಪಕ ನಿರ್ದೇಶಕ ಎನ್.ಅಶೋಕ್, ಶಿಕ್ಷಕಿ ಸುನೀತಾ, ಕನ್ನಡ ಸಂಘದ ಮುಖ್ಯಸ್ಥ ಎನ್. ರಾಮಾಂಜಿ, ಕನ್ನಡ ಭಾಷಾ ಶಿಕ್ಷಕರು ಮಂಜಮ್ಮ, ದೀಪಾ, ಪಲ್ಲವಿ, ವಿದ್ಯಾರ್ಥಿ ಅಧ್ಯಕ್ಷೆ ತನ್ಮಯಿ, ಉಪಾಧ್ಯಕ್ಷ ವಿಕಾಸ್, ಕಾರ್ಯದರ್ಶಿ ಪ್ರಿಯಾಂಕಾ, ಇಂಗ್ಲಿಷ್ ಸಂಘದ ಮುಖ್ಯಸ್ಥ ಮಂಜುನಾಥ್, ಎಲ್ಜಿಬತ್ ಜುಡಿ, ಸೋಶಿಯಲ್ ಕ್ಲಬ್ ಮುಖ್ಯಸ್ಥ ಶ್ರೀನಿವಾಸಯ್ಯ, ಇಸ್ಮಾಯಿಲ್, ವರ್ಷ, ಹಿಂದಿ ಕ್ಲಬ್ ಮುಖ್ಯಸ್ಥೆ ರಾಧಾ, ಶೃತಿ, ವಿಜ್ಞಾನ ಸಂಘ ಮುಖ್ಯಸ್ಥ ಸತ್ಯನಾರಾಯಣ, ಲೀಜಿ, ಗುಲ್ನಾಜ್, ಗಣಿತ ಸಂಘದ ಮುಖ್ಯಸ್ಥ ರವಿಕುಮಾರ್, ಚಂದ್ರ, ಸಫಲ, ದೈಹಿಕ ಶಿಕ್ಷಕ ಭರತ್, ದೇವರಾಜ್ ಗೌಡ ಹಾಜರಿದ್ದರು.

SUBSCRIBE, LIKE & SHARE ನಮ್ಮ ಶಿಡ್ಲಘಟ್ಟ

Facebook 👍🏻
http://www.facebook.com/sidlaghatta

Instagram 📷
http://www.instagram.com/sidlaghatta

Youtube ▶
https://www.youtube.com/c/sidlaghatta

Website 🌐
http://www.sidlaghatta.com

📱 Join Telegram
https://t.me/Sidlaghatta

- Advertisement -
RELATED ARTICLES
- Advertisment -

Most Popular

error: Content is protected !!