ಪ್ರಶ್ನಿಸುವ ಮನೋಭಾವ ಬೆಳೆಸಿ, ಶ್ರದ್ಧೆಯಿಂದ ದುಡಿಯಿರಿ: ಡಾ. ಎಚ್.ಎನ್. ಶಿವಶಂಕರ್ ಕರೆ

- Advertisement -
- Advertisement -

ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಕಾಳಜಿಯಿಂದ ನೋಡಿಕೊಳ್ಳುವ ಮೂಲಕ ಅವರಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಬೇಕು. ಕಲಿಕೆಯ ಮೂಲಕ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಂಶುಪಾಲ ಹಾಗೂ ಶಿಕ್ಷಣ ತಜ್ಞ ಡಾ. ಎಚ್.ಎನ್. ಶಿವಶಂಕರ್ ಹೇಳಿದರು.

Quick facts: Retired principal and education expert Dr. H.N. Shivashankar was chief guest at “Teachers’ & Engineers’ Day 2026,” held on Tuesday at SJC Institute of Technology (SJCIT), Chikkaballapura.

SJCIT Chikkaballapura Teachers and Engineers Day 2026 Dr H N Shivashankar

ಕಾರ್ಯಕ್ರಮ ಎಲ್ಲಿ ನಡೆಯಿತು?

ನಗರದ ಎಸ್‌.ಜೆ.ಸಿ.ಐ.ಟಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ “ಎಂಜಿನಿಯರ್ಸ್‌ ಗಳ ದಿನ ಹಾಗೂ ಶಿಕ್ಷಕರ ದಿನಾಚರಣೆ–2026” ಕಾರ್ಯಕ್ರಮದಲ್ಲಿ ಡಾ. ಎಚ್.ಎನ್. ಶಿವಶಂಕರ್ ಮಾತನಾಡಿದರು.

ಡಾ. ಶಿವಶಂಕರ್ ಏನು ಹೇಳಿದರು?

ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಸಾಧನೆಗಳನ್ನು ಸ್ಮರಿಸಿದ ಅವರು, ಯಾವುದೇ ಕೆಲಸವನ್ನು ಶ್ರದ್ಧೆ ಮತ್ತು ಬದ್ಧತೆಯಿಂದ ಮಾಡಿದರೆ ಪರಿಪೂರ್ಣತೆ ಸಾಧಿಸಲು ಸಾಧ್ಯ ಎಂದರು. ಶಿಕ್ಷಣವು ಕೇವಲ ಜ್ಞಾನ ನೀಡುವುದಷ್ಟೇ ಅಲ್ಲದೆ, ವ್ಯಕ್ತಿತ್ವ ರೂಪಿಸುವ ಕೆಲಸವನ್ನೂ ಮಾಡುತ್ತದೆ; ಕಲಿಕೆಯೇ ಮೆದುಳಿಗೆ ಟಾನಿಕ್ ಇದ್ದಂತೆ ಎಂದು ಹೇಳಿದ ಅವರು, ಉತ್ತಮ ಶಿಕ್ಷಣದ ಮೂಲಕ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಾಮರ್ಥ್ಯ ಹೊಂದಿರುವ ಎಂಜಿನಿಯರ್‌ಗಳನ್ನು ರೂಪಿಸಬೇಕು ಎಂದರು. ಸರ್ ಎಂ. ವಿಶ್ವೇಶ್ವರಯ್ಯ ಹಾಗೂ ತತ್ವಜ್ಞಾನಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆದರ್ಶಗಳನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು.

ಇತರೆ ಗಣ್ಯರು ಏನೆಂದರು?

ಆಶೀರ್ವಚನ ನೀಡಿದ ಪೂಜ್ಯ ಶ್ರೀ ಶ್ರೀ ಮಂಗಳನಾಥ ಸ್ವಾಮೀಜಿ, ಇಂದಿನ ತಲೆಮಾರಿಗೆ ಸೂಕ್ತವಾಗುವಂತೆ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಂಡು ಹೊಸ ಜ್ಞಾನ ಗಳಿಸಬೇಕು; ಹಳೆಯ ಬೇರುಗಳೊಂದಿಗೆ ಹೊಸ ಚಿಗುರಿನಂತೆ ಜ್ಞಾನ ಮತ್ತು ತಂತ್ರಜ್ಞಾನವನ್ನು ಬೆಳೆಸಿಕೊಳ್ಳಬೇಕು ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಟಿ. ರಾಜು ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ, ನಾಯಕತ್ವ ಗುಣ ಹಾಗೂ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಇನ್ನೇನು ನಡೆಯಿತು?

ಕಾರ್ಯಕ್ರಮದಲ್ಲಿ ನಿವೃತ್ತ ಬೋಧಕ, ಬೋಧಕೇತರ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾಲೇಜಿನ ಆಡಳಿತಾಧಿಕಾರಿ ಶ್ರೀ ರಂಗಸ್ವಾಮಿ ಜಿ.ಆರ್., ಮುಖ್ಯಸ್ಥ ಡಾ. ಮಂಜುನಾಥ್ ಕುಮಾರ್ ಬಿ.ಎಚ್., ವಿವಿಧ ವಿಭಾಗ ಮುಖ್ಯಸ್ಥರು, ಬೋಧಕ–ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQ)

When and where was Teachers’ & Engineers’ Day 2026 celebrated?
It was held on Tuesday at SJC Institute of Technology (SJCIT), Chikkaballapura.
Who was the chief guest?
Retired principal and education expert Dr. H.N. Shivashankar was the chief guest and main speaker.
What else happened at the event?
Retired teaching and non-teaching staff were felicitated, and staff who rendered outstanding service in various departments were honoured with awards.

Stay tuned for more local updates.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here

Captcha verification failed!
CAPTCHA user score failed. Please contact us!