Bagepalli : ಗುರುವಾರ ಬಾಗೇಪಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ನವದೆಹಲಿಯ ಸ್ಮೈಲ್ ಫೌಂಡೇಷನ್ ವತಿಯಿಂದ ಬಂದಿರುವ 10 ಸಾವಿರ Oxygen Concentrator ಮತ್ತು 9 ಸಾವಿರ RTPCR Kit ಗಳನ್ನು Smile Foundation ನ ಹಿರಿಯ ವ್ಯವಸ್ಥಾಪಕಿ ಎನ್. ರೋಹಿಣಿ ಹಸ್ತಾಂತರಿಸಿದ್ದರು.
ಮಾಧ್ಯಮದವರೊಂದಿಗೆ ಮಾತನಾಡಿದ ಎನ್. ರೋಹಿಣಿ ಕರೋನದ ಮೊದಲೆರಡು ಅಲೆಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ RTPCR Kit ಗಳ ಪೂರೈಕೆ ಕಡಿಮೆ ಇತ್ತು ಹಾಗಾಗಿ ಜನರು ಪರೆದಾಡಬೇಕಾಗಿತ್ತು. ಇದನ್ನು ಅರಿತ ಸ್ಮೈಲ್ ಫೌಂಡೇಷನ್ ಗ್ರಾಮೀಣ ಪ್ರದೇಶದ ಜನಕ್ಕೆ ಅನುಕೂಲ ಕಲ್ಪಿಸಲು ಕೇಂದ್ರ ಕಚೇರಿಯಿಂದ Oxygen Concentrator ಮತ್ತು RTPCR Kit ಗಳನ್ನು ವಿತರಣೆ ಮಾಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಾಗೇಪಲ್ಲಿ ಸರ್ಕಾರಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಮುರಳಿಮೋಹನ್, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ಸುಭಾನ್ ಸಾಬ್, ಫಾರ್ಮಾಸಿಸ್ಟ್ ಹರೀಶ್, ಫೌಂಡೇಷನ್‌ನ ಕೋ ಆರ್ಡಿನೇಟರ್ ಸುಧಾಕರ್, ಶುಶ್ರೂಷಕಿ ನಂದಿನಿ, ಹೇಮಂತ್ ಹಾಜರಿದ್ದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur