Chikkaballapur : ಚಿಕ್ಕಬಳ್ಳಾಪುರ ತಾಲ್ಲೂಕಿನ ಸೊಪ್ಪಹಳ್ಳಿ (Soppahalli) ಗ್ರಾಮದ ಬಾಲ ಸುಬ್ರಮಣ್ಯ ಸ್ವಾಮಿ ದೇವಾಲಯದ (Sri Bala Subrahmanya Swami Gudi) ಗೇಟಿನ ಬೀಗ ಹೊಡೆದು ಹುಂಡಿಯಲ್ಲಿ ಹಣ, ಗರ್ಭಗುಡಿಯಲ್ಲಿದ್ದ ಸುಮಾರು ₹ 2 ಲಕ್ಷ ಬೆಲೆ ಬಾಳುವ ದೇವರ 2 ಬೆಳ್ಳಿಯ ಮುಖವಾಡ ಮತ್ತು ಬೆಳ್ಳಿ ಶೂಲ ಕಳ್ಳರು ಕಳವು (Theft) ಮಾಡಿದ್ದಾರೆ ಎಂದು ದೇವಾಲಯದ ಅರ್ಚಕ ಶಿವರಾಮ್ ದೂರು ನೀಡಿದ್ದಾರೆ.
ಈ ಬಗ್ಗೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.